ಸೋಮವಾರ, ಮಾರ್ಚ್ 8, 2021
27 °C

ರಿಯಲ್ ಹೀರೊ ಸೋನು ಸೂದ್‌ಗೆ ಈಗ ದುಬ್ಬತಂಡಾ ಗ್ರಾಮದಲ್ಲಿ 'ದೇಗುಲ'

ಎಎನ್ಐ Updated:

ಅಕ್ಷರ ಗಾತ್ರ : | |

Sonu Sood

ಸಿದ್ದಿಪೇಟೆ: ಕೊರೊನಾ ವೈರಸ್ ಸಾಂಕ್ರಾಮಿಕದ ಸಂಕಷ್ಟದ ಸಮಯದಲ್ಲಿ ತಮ್ಮ ‘ನಿಸ್ವಾರ್ಥ ಕಾರ್ಯ’ದಿಂದಾಗಿ ರಿಯಲ್ ಹೀರೊ ಎನಿಸಿಕೊಂಡಿದ್ದ ನಟ ಸೋನು ಸೂದ್ ಇದೀಗ ಹಲವರ ಪಾಲಿನ ದೇವರಾಗಿದ್ದಾರೆ. ಹೌದು, ಡಿಸೆಂಬರ್ 20 ರಂದು ತೆಲಂಗಾಣದ ಸಿದ್ದಿಪೇಟೆಯಲ್ಲಿ ಸೋನು ಸೂದ್‌ಗಾಗಿ ದೇವಾಲಯವನ್ನು ನಿರ್ಮಿಸಲಾಗಿದೆ. 

ದುಬ್ಬತಂಡಾ ಗ್ರಾಮದಲ್ಲಿ ಸೋನು ಸೂದ್‌ಗಾಗಿ ಅಭಿಮಾನಿಗಳು ದೇವಾಲಯ ನಿರ್ಮಿಸಿ ಪೂಜಿಸಿದ್ದಾರೆ. ರಾಷ್ಟ್ರವ್ಯಾಪಿ ಹೇರಿಕೆಯಾಗಿದ್ದ ಲಾಕ್‌ಡೌನ್‌ ಸಮಯದಲ್ಲಿ ಸಾವಿರಾರು ವಲಸೆ ಕಾರ್ಮಿಕರಿಗೆ ತಮ್ಮ ಊರಿಗೆ ತಲುಪಲು ಸಹಾಯ ಮಾಡುವ ಮೂಲಕ ಸೋನು ಸೂದ್ ನೆರವಾಗಿ ಮನೆ ಮಾತಾಗಿದ್ದರು. 

ಲಾಕ್‍‌ಡೌನ್ ಸಮಯದಲ್ಲಿ ಸೋನು ಸೂದ್ ನಮಗೆ ಸಹಾಯ ಮಾಡಿದ್ದಾರೆ. ಮಾನವೀಯತೆಗೆ ಮತ್ತೊಂದು ಹೆಸರು ಸೋನು ಸೂದ್. ಯಾವುದೇ ರೀತಿಯ ಸಮಸ್ಯೆಗಳು ಎದುರಾದರೂ ಕೂಡ ಅವರು ಅದನ್ನು ಬಗೆಹರಿಸಿದ್ದಾರೆ. ಭಾರತದಲ್ಲಿರುವ ಒಬ್ಬನೇ ದೇವರೆಂದರೆ ಅದು ಸೋನು ಸೂದ್ ಮಾತ್ರ ಎನ್ನುತ್ತಾರೆ ಸ್ಥಳಿಯರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು