ಸೋಮವಾರ, ಸೆಪ್ಟೆಂಬರ್ 20, 2021
23 °C

'ನನ್ನ ಮಗುವಿನ ತಂದೆ ಯಾರು ಎನ್ನುವುದು ಆ ತಂದೆಗಷ್ಟೇ ಗೊತ್ತು': ಸಂಸದೆ ನುಸ್ರತ್

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ನಟಿ ಹಾಗೂ ಟಿಎಂಸಿ ಸಂಸದೆ ನುಸ್ರತ್ ಜಹಾನ್ ತಮ್ಮ ಮಗುವಿನ ತಂದೆ ಯಾರು ಎಂಬ ವಿಷಯದಲ್ಲಿ ಮೌನ ಮುರಿದಿದ್ದಾರೆ.

ಆ. 26 ರಂದು ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಅವರಿಗೆ ಮೊದಲು ಎದುರಾಗಿದ್ದ ಪ್ರಶ್ನೆಯೇ ತಮ್ಮ ಮಗುವಿನ ತಂದೆ ಯಾರು? ಎಂದು. ಈ ಬಗ್ಗೆ ಮಾಧ್ಯಮಗಳಿಗೆ ಸಿಡುಕಿನಿಂದಲೇ ಉತ್ತರಿಸಿರುವ ಅವರು, ‘ನನ್ನ ಮಗುವಿನ ತಂದೆ ಯಾರು ಎಂಬುದು ಆ ತಂದೆಗೆ ಅಷ್ಟೇ ಗೊತ್ತು‘ ಎಂದು ಹೇಳಿದ್ದಾರೆ.

‘ಈ ರೀತಿಯ ಪ್ರಶ್ನೆಗಳನ್ನು ಕೇಳುವುದು ಒಂದು ಮಹಿಳೆಗೆ ಮಾಡುವ ಅವಮಾನ ಎಂದಿರುವ ಅವರು, ನಾನು ಹಾಗೂ ಯಶ್ ದಾಸ್ ಗುಪ್ತಾ ಮಗುವಿನ ಜೊತೆ ಖುಷಿಯಾಗಿದ್ದೇವೆ‘ ಎಂದು ಹೇಳಿದ್ದಾರೆ. ಅವರು ಕೋಲ್ಕತ್ತದಲ್ಲಿ ಸಲೂನ್ ಒಂದರ ಉದ್ಘಾಟನೆಗೆ ತೆರಳಿದ್ದರು.

 

ನುಸ್ರತ್ ಜಹಾನ್ ಹಾಗೂ ಟರ್ಕಿಯಲ್ಲಿರುವ ಉದ್ಯಮಿ ನಿಖಿಲ್ ಜೈನ್ ಅವರ ವೈವಾಹಿಕ ಸಂಬಂಧ ಅಂತ್ಯವಾದ ಬಳಿಕ ನುಸ್ರತ್ ಅವರ ಹೆಸರು ಯಶ್ ದಾಸ್ ಗುಪ್ತಾ ಅವರ ಜೊತೆ ಗುರುತಿಸಿಕೊಂಡಿತ್ತು. ಅಲ್ಲದೇ ಈ ನಡುವೆಯೇ ಅವರು ಗರ್ಭಿಣಿಯಾದರು. ಗರ್ಭಿಣಿಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ನುಸ್ರತ್ ಮಗುವಿನ ತಂದೆ ಯಾರು? ಎಂದು ಅನೇಕರು ಪ್ರಶ್ನೆ ಕೇಳುತ್ತಿದ್ದರು. ಮಾಧ್ಯಮಗಳಿಂದಲೂ ನುಸ್ರತ್ ಪ್ರಶ್ನೆ ಎದುರಿಸಬೇಕಾಗಿತ್ತು. ಆದರೆ, ನುಸ್ರತ್ ಅವರು ಮಾತ್ರ ಇನ್ನೂ ಗುಟ್ಟು ಕಾಪಾಡಿಕೊಂಡಿದ್ದಾರೆ.

ನಿಖಿಲ್ ಜೈನ್ ಅವರನ್ನು ನುಸ್ರತ್ 2019 ರಲ್ಲಿ ಟರ್ಕಿಯಲ್ಲಿ ವಿವಾಹವಾಗಿದ್ದರು ಎನ್ನಲಾಗಿತ್ತು. ಆದರೆ, ಇದು ಭಾರತೀಯ ಕಾನೂನು ಪ್ರಕಾರ ಮದುವೆಯಲ್ಲ, ಅದೊಂದು ಲಿವ್‌ಇನ್ ರಿಲೇಶನ್ಸ್ ಎಂದು ನುಸ್ರತ್ ಹೇಳಿ ಕೈ ತೊಳೆದುಕೊಂಡಿದ್ದರು.

ಇವುಗಳನ್ನೂ ಓದಿ...

ನಿಖಿಲ್‌ ಜೈನ್‌ ಜತೆಗಿನ ಮದುವೆ ಕಾನೂನುಬದ್ಧವಲ್ಲ: ನಟಿ, ಸಂಸದೆ ನುಸ್ರತ್ ಜಹಾನ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು