ಶನಿವಾರ, ಮಾರ್ಚ್ 25, 2023
23 °C

ಕೇರಳ: ಅದಾನಿ ಬಂದರು ವಿರೋಧಿಸಿ ದೋಣಿಗೆ ಬೆಂಕಿ ಹಚ್ಚಿದ ಮೀನುಗಾರರು

ಪಿಟಿಐ Updated:

ಅಕ್ಷರ ಗಾತ್ರ : | |

ತಿರುವನಂತಪುರಂ: ಗೌತಮ್‌ ಅದಾನಿ ಸಮೂಹದ ವಿಳಿಂಞ ಅಂತರರಾಷ್ಟ್ರೀಯ ಬಂದರು ನಿರ್ಮಾಣ ಕಾಮಗಾರಿ ವಿರೋಧಿಸಿ ಸ್ಥಳೀಯರು ನಡೆಸುತ್ತಿರುವ ಪ್ರತಿಭಟನೆಯು 100ನೇ ದಿನಕ್ಕೆ ಕಾಲಿಟ್ಟಿದೆ.

ಪ್ರತಿಭಟನೆ ವೇಳೆ ಮೀನುಗಾರರು ತಮ್ಮ ದೋಣಿಗೆ ಬೆಂಕಿ ಹಚ್ಚಿ ಆಕ್ರೋಷ ವ್ಯಕ್ತಪಡಿಸಿದರು. ಸಮುದ್ರ ತೀರ ಇಲ್ಲದಿದ್ದರೆ ನಮಗೆ ಬದುಕಿಲ್ಲ. ಬಂದರು ಚಾಲ್ತಿಗೆ ಬಂದರೆ ನಮ್ಮ ತೀರವನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತೇವೆ ಎಂದು ಅಳಲು ತೋಡಿಕೊಂಡರು.

ಮೀನುಗಾರರು ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದರಿಂದ ಕೇರಳ ಪೊಲೀಸರು ಬಂದರಿಗೆ ಮಂಗಳವಾರ ಬಿಗಿ ಭದ್ರತೆ ಒದಗಿಸಿದ್ದರು.

ಜನರ ಪ್ರತಿಭಟನೆಯ ಕಾರಣ 3 ತಿಂಗಳಿನಿಂದ ಬಂದರು ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿತ್ತು. ಕೆಥೋಲಿಕ್‌ ಧರ್ಮಗುರುಗಳು ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಬಂದರು ನಿರ್ಮಾಣದಿಂದ ಅಲ್ಲಿನ ಜನರ ಜೀವನೋಪಾಯಕ್ಕೆ ಹೊಡೆತ ಬೀಳಲಿದೆ ಎಂಬುದು ಪ್ರತಿಭಟನಕಾರರ ಆರೋಪವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು