ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರದಲ್ಲೇ ಕೋವಿಡ್‌ನ ಸಣ್ಣ ಅಲೆಯೊಂದನ್ನು ಎದುರಿಸಲಿರುವ ಭಾರತ: ಎಚ್ಚರಿಕೆ  

Last Updated 2 ಆಗಸ್ಟ್ 2021, 3:18 IST
ಅಕ್ಷರ ಗಾತ್ರ

ನವದೆಹಲಿ: ಭಾರತವು ಅತೀ ಶೀಘ್ರದಲ್ಲೇ ಕೋವಿಡ್‌ನ ಸಣ್ಣ ಅಲೆಯೊಂದನ್ನು ಎದುರಿಸಲಿದೆ. ಅದು ಅಕ್ಟೋಬರ್‌ ಹೊತ್ತಿಗೆ ಉತ್ತುಂಗಕ್ಕೇರಲಿದೆ ಎಂದು ಸಂಶೋಧಕರು ಗಣಿತದ ಮಾದರಿಯ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಈ ತಿಂಗಳಲ್ಲಿ ದೇಶವು ಸಾಂಕ್ರಾಮಿಕ ರೋಗದ ಕೆಟ್ಟ ಪರಿಸ್ಥಿತಿಯನ್ನು ಎದುರಿಸಲಿದೆ. ಈ ಅಲೆಯು ಉತ್ತುಂಗಕ್ಕೆ ಏರಲಿದ್ದು, ದಿನವೊಂದಕ್ಕೆ 1,00,000 ಅಥವಾ 1,50,000 ಸನಿಹದ ಪ್ರಕರಣಗಳು ವರದಿಯಾಗಲಿವೆ ಎಂದು ಹೈದರಾಬಾದ್ ಮತ್ತು ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಮತುಕುಮಳ್ಳಿ ವಿದ್ಯಾಸಾಗರ್‌ ಮತ್ತು ಮಣೀಂದ್ರ ಅಗರವಾಲ್ ನೇತೃತ್ವದ ಸಂಶೋಧನಾ ತಂಡ ತಿಳಿಸಿದೆ.

ಇದೇ ತಂಡ, ಗಣಿತದ ಮಾದರಿಯ ಮೂಲಕ ಎರಡನೇ ಅಲೆಯ ಏರಿಳಿತಗಳ ಸ್ಪಷ್ಟ ಮುನ್ಸುಚನೆ ನೀಡಿತ್ತು.

ಸದ್ಯ ಹೆಚ್ಚು ಪ್ರಕರಣಗಳು ಕಂಡು ಬರುತ್ತಿರುವ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಚಿತ್ರಣವೇ ಬದಲಾಗಬಹುದು ಎಂದೂ ವಿದ್ಯಾಸಾಗರ್‌ ಅವರು ತಿಳಿಸಿದ್ದಾರೆ. ಈ ಕುರಿತು ಸುದ್ದಿ ಸಂಸ್ಥೆ ‘ಬ್ಲೂಮ್‌ಬರ್ಗ್‌’ ವರದಿ ಮಾಡಿದೆ.

ಎರಡನೇ ಅಲೆಗೆ ಹೋಲಿಸಿದರೆ ಸಂಭಾವ್ಯ ಅಲೆಯು ಸಣ್ಣದಾಗಿರುವ ಸಾಧ್ಯತೆಗಳಿವೆ. ಎರಡನೇ ಅಲೆ ಉತ್ತುಂಗದಲ್ಲಿದ್ದ ವೇಳೆ ಮೇ 7ರಂದು 4 ಲಕ್ಷ ಪ್ರಕರಣಗಳು ದೇಶದಲ್ಲಿ ವರದಿಯಾಗಿದ್ದವು. ನಂತರ ತೀವ್ರವಾಗಿ ಕುಸಿಯಲಾರಂಭಿಸಿತ್ತು.

ದೇಶದಲ್ಲಿ ಲಸಿಕೆ ಅಭಿಯಾನಕ್ಕೆ ವೇಗ ನೀಡುವಂತೆಯೂ, ಹಾಟ್‌ಸ್ಪಾಟ್‌ಗಳನ್ನು ಪತ್ತೆಹಚ್ಚುವಂತೆಯೂ ಸಂಶೋಧಕರು ಸಲಹೆ ನೀಡಿದ್ದಾರೆ. ಜೊತೆಗೆ ಹೊಸ ಮಾದರಿ ಹೊರ ಹೊಮ್ಮಲು ಕಾರಣವಾಗುವ ಅಂಶಗಳತ್ತ ಗಮನಹರಿಸಬೇಕು ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT