ಶನಿವಾರ, ಅಕ್ಟೋಬರ್ 31, 2020
19 °C

ವಿದೇಶಿ ಹೂಡಿಕೆ ನಿಯಮ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಕ್ಷಣಾ ಸಚಿವಾಲಯವು ‘ರಕ್ಷಣಾ ಸಾಮಗ್ರಿ ಖರೀದಿ’ ನಿಯಮ ಗಳನ್ನು ಬದಲಾವಣೆ ಮಾಡಿದೆ. ಸರ್ಕಾರ–ಸರ್ಕಾರದ ನಡುವಣ ಒಪ್ಪಂದ, ಸರ್ಕಾರ ಮತ್ತು ವಿದೇಶಿ ಏಕ ಏಜೆನ್ಸಿ ನಡುವಣ ಒಪ್ಪಂದದಲ್ಲಿ ‘ವಿದೇಶಿ ಹೂಡಿಕೆ’ ಷರತ್ತನ್ನು ರದ್ದುಪಡಿಸಿದೆ.

ಭಾರತವು ವಿದೇಶಿ ಕಂಪನಿಯಿಂದ ರಕ್ಷಣಾ ಸಾಮಗ್ರಿ ಖರೀದಿಸಿದರೆ, ಆ ಕಂಪನಿಯು ಒಪ್ಪಂದದ ಒಂದು ಭಾಗವನ್ನು ಭಾರತದಲ್ಲೇ ಹೂಡಿಕೆ ಮಾಡಬೇಕಿತ್ತು. ಆದರೆ ಈ ಷರತ್ತನ್ನು ಈಗ ತೆಗೆದುಹಾಕಲಾಗಿದೆ. 2006ರಲ್ಲಿ ಯುಪಿಎ ಸರ್ಕಾರವು ಈ ಷರತ್ತನ್ನು ಜಾರಿಗೆ ತಂದಿತ್ತು.

ಫ್ರಾನ್ಸ್‌ನ ಡಾಸೊ ಏವಿಯೇಷನ್‌ ಮತ್ತು ಭಾರತ ಸರ್ಕಾರದ ನಡುವಣ ಒಪ್ಪಂದದಂತೆ ಭಾರತವು 36 ರಫೇಲ್‌ ಯುದ್ಧವಿಮಾನಗಳನ್ನು ಖರೀದಿಸಿದೆ. ವಿದೇಶಿ ಪಾಲುದಾರಿಕೆ ಷರತ್ತಿನ ಅನ್ವಯ ಡಾಸೊ ಏವಿಯೇಷನ್ ವಿಮಾನದ ತಂತ್ರಜ್ಞಾನವನ್ನು ಭಾರತದ ‘ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ (ಡಿಆರ್‌ಡಿಒ)’ ವರ್ಗಾವಣೆ ಮಾಡಬೇಕಿತ್ತು. ಆದರೆ ತಂತ್ರಜ್ಞಾನ ವರ್ಗಾವಣೆಯಾಗಿಲ್ಲ. ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿ ಈ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು.

2007ರಿಂದ 2018ರ ಮಾರ್ಚ್‌ವರೆಗೆ ಭಾರತವು ₹ 66,427 ಕೋಟಿ ಮೊತ್ತದ 46 ವಿದೇಶಿ ಹೂಡಿಕೆ ಒಪ್ಪಂದಗಳನ್ನು ಮಾಡಿಕೊಂಡಿದೆ. ಇದರಲ್ಲಿ ವಿದೇಶಿ ಕಂಪನಿಗಳು ₹ 19,223 ಮೊತ್ತದ ಒಪ್ಪಂದಗಳ ಜಾರಿಗೆ ಮುಂದಾಗಿವೆ. ಅದರಲ್ಲಿ ₹ 11,396 ಕೋಟಿ ಮೊತ್ತದ ಒಪ್ಪಂದ ಜಾರಿಯಾಗಿದ್ದು, ₹ 5,457 ಕೋಟಿ ಮೊತ್ತದ ಒಪ್ಪಂದಗಳನ್ನು ಮಾತ್ರ ಸರ್ಕಾರ ಮಾನ್ಯ ಮಾಡಿದೆ. ಹೀಗಾಗಿ ಈ ನೀತಿಯನ್ನು ಪರಿಷ್ಕರಿಸಿ ಎಂದು ಸಿಎಜಿ ವರದಿಯಲ್ಲಿ ಹೇಳಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು