ಬುಧವಾರ, ಏಪ್ರಿಲ್ 14, 2021
31 °C

ಕೃಷಿ ಕಾಯ್ದೆಗಳ ವಿರುದ್ಧದ ರೈತರ ಹೋರಾಟ: ದೆಹಲಿಯ ಗಡಿಯಲ್ಲಿ ಹುತಾತ್ಮರ ಸ್ಮಾರಕ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಗಾಜಿಯಾಬಾದ್‌: ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟದಲ್ಲಿ ಸಾವನ್ನಪ್ಪಿದ ರೈತರ ಸ್ಮರಣಾರ್ಥ ಪ್ರತಿಭಟನಾ ಸ್ಥಳ ‘ಗಾಜಿಪುರ–ಗಾಜಿಯಾಬಾದ್‌(ಉತ್ತರ ಪ್ರದೇಶದ ಗಡಿ)ಗಡಿಯಲ್ಲಿ ‘ಹುತಾತ್ಮರ ಸ್ಮಾರಕ' ನಿರ್ಮಾಣಕ್ಕೆ ಭಾರತೀಯ ಕಿಸಾನ್‌ ಒಕ್ಕೂಟ(ಬಿಕೆಯು) ಅಡಿಗಲ್ಲು ಹಾಕಿದೆ.

ಬಿಕೆಯು ಮುಖಂಡ ರಾಕೇಶ್ ಸಿಂಗ್ ಟಿಕಾಯತ್, ಸಾಮಾಜಿಕ ಹೋರಾಟಗಾರ್ತಿ ಮೇಧಾಪಾಟ್ಕರ್ ಅವರು ಮಂಗಳವಾರ ‘ಹುತಾತ್ಮ ಸ್ಮಾರಕ‘ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದಾರೆ. ಮುಂದೆ ಇಲ್ಲಿ ಶಾಶ್ವತವಾದ ಸ್ಮಾರಕವನ್ನು ನಿರ್ಮಿಸಲಾಗುವುದು ಎಂದು ಬಿಕೆಯು ಮಾಧ್ಯಮ ಉಸ್ತುವಾರಿ ಧರ್ಮೇಂದ್ರ ಮಲಿಕ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಗಾಜಿಯಾಬಾದ್ ಜಿಲ್ಲಾಧಿಕಾರಿ ಅಜಯ್ ಶಂಕರ್ ಪಾಂಡೆ, 'ಹುತಾತ್ಮರ ಸ್ಮಾರಕ'ಕ್ಕೆ ನೆರವೇರಿರುವ ಶಂಕುಸ್ಥಾಪನೆ ಕೇವಲ ಸಾಂಕೇತಿಕವಷ್ಟೇ ಹೊರತು ಶಾಶ್ವತವಲ್ಲ‘ ಹೇಳಿದ್ದಾರೆ.

ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟದಲ್ಲಿ 320 ರೈತರು ಸಾವನ್ನಪ್ಪಿದ್ದಾರೆ. ಸಾಮಾಜಿಕ ಕಾರ್ಯಕರ್ತರು ‘ಹುತಾತ್ಮರ ಸ್ಮಾರಕ‘ ನಿರ್ಮಾಣಕ್ಕಾಗಿ ಎಲ್ಲ ಮೃತ ರೈತರ ಹಳ್ಳಿಗಳಿಂದ ಮಣ್ಣನ್ನು ಸಂಗ್ರಹಿಸಿ ಪ್ರತಿಭಟನಾ ಸ್ಥಳಕ್ಕೆ ತಂದಿದ್ದಾರೆ ಎಂದು ಬಿಕೆಯು ತಿಳಿಸಿದೆ.

ಇದರ ಜತೆಗೆ,  ಸಾಮಾಜಿಕ ಹೋರಾಟಗಾರರ ಒಂದು ಗುಂಪು ‘ಮಿಟ್ಟಿ ಸತ್ಯಾಗ್ರಹದ (ಮಣ್ಣಿನ ಸತ್ಯಾಗ್ರಹ)‘ ಹೆಸರಲ್ಲಿ ವಿವಿಧ ರಾಜ್ಯಗಳಿಂದ ಮಣ್ಣನ್ನು ಸಂಗ್ರಹಿಸಿದೆ. ಇದರ ಜತೆಗೆ, ಸ್ವಾತಂತ್ರ್ಯ ಹೋರಾಟಗಾರರಾದ ಭಗತ್‌ ಸಿಂಗ್, ಸುಖದೇವ್‌ ರಾಜಗುರು, ಚಂದ್ರಶೇಖರ್ ಆಜಾದ್, ರಾಮ್‌ ಪ್ರಸಾದ್‌ ಮತ್ತು ಅಶಫಾಖ್‌ ಉಲ್ಲಾ ಖಾನ್‌ ಜನಿಸಿದ ಸ್ಥಳದಿಂದ ಮಣ್ಣನ್ನು ಸಂಗ್ರಹಿಸಿ ತರಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು