ಶನಿವಾರ, ಏಪ್ರಿಲ್ 1, 2023
31 °C

ತೆಲಂಗಾಣ: ನಾಲ್ವರು ಮಾವೋವಾದಿಗಳ ಶರಣಾಗತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್: ಇಬ್ಬರು ಮಹಿಳೆಯರು ಸೇರಿದಂತೆ ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಗೆ ಸೇರಿದ ನಾಲ್ವರು ಸದಸ್ಯರು ಇಲ್ಲಿನ ಭದ್ರಾದ್ರಿ ಕೊತಗುಂಡೆಂ ಜಿಲ್ಲೆಯಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ.

ಈ ನಾಲ್ವರು ಚೆರ್ಲಾ ಮಂಡಲ್‌ಗೆ ಸೇರಿದವರು. ಕಳೆದ ಒಂದು ವರ್ಷದಿಂದ ಇವರು ಸಿಪಿಐ (ಮಾವೋವಾದಿ) ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದರು.

ಪೊಲೀಸರ ಪ್ರಕಾರ, ಈ ನಾಲ್ವರು ಮಾವೋವಾದಿ ಪಕ್ಷಕ್ಕೆ ಗ್ರಾಮಗಳಿಂದ ಆಹಾರ ಪೂರೈಸುತ್ತಿದ್ದು, ಜೊತೆಗೆ ಪೊಲೀಸರ ಚಲನವಲನ ಕುರಿತು ಮಾಹಿತಿಯನ್ನು ನೀಡುತ್ತಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು