ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎನ್‌ಜಿ ದರ ಏರಿಕೆ: ಇಂದಿನಿಂದ ದೆಹಲಿಯಲ್ಲಿ ಆಟೊ, ಟ್ಯಾಕ್ಸಿ ಚಾಲಕರ ಮುಷ್ಕರ

Last Updated 18 ಏಪ್ರಿಲ್ 2022, 3:40 IST
ಅಕ್ಷರ ಗಾತ್ರ

ನವದೆಹಲಿ: ವಾಹನಗಳ ಇಂಧನ ದರ ಏರಿಕೆಯನ್ನು ವಿರೋಧಿಸಿ ದೆಹಲಿಯಲ್ಲಿ ಆಟೊ, ಟ್ಯಾಕ್ಸಿ ಹಾಗೂ ಮಿನಿ ಬಸ್‌ ಡ್ರೈವರ್‌ಗಳು ಇಂದಿನಿಂದ ಮುಷ್ಕರ ಕೈಗೊಂಡಿದ್ದಾರೆ. ಇದರಿಂದಾಗಿ ದೆಹಲಿಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆಯಾಗುವ ಸಾಧ್ಯತೆ ಇದೆ.

ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯ ಜೊತೆಗೆ ಆಟೊ ಮತ್ತು ಟ್ಯಾಕ್ಸಿಗಳಿಗೆ ಇಂಧನವಾಗಿ ಬಳಸಲಾಗುತ್ತಿರುವ ಸಿಎನ್‌ಜಿ ದರದಲ್ಲೂ ಹೆಚ್ಚಳವಾಗಿದೆ. ವಾಹನ ಚಾಲಕರ ಒಕ್ಕೂಟಗಳು ಆಟೊ ಮತ್ತು ಟ್ಯಾಕ್ಸಿ ಮೀಟರ್ ದರ ಹೆಚ್ಚಿಸಲು ಬೇಡಿಕೆ ಇಟ್ಟಿದ್ದಾರೆ. ಅದರೊಂದಿಗೆ ಸಿಎನ್‌ಜಿ ದರ ಕಡಿಮೆ ಮಾಡುವಂತೆ ಆಗ್ರಹಿಸಿದ್ದಾರೆ.

ದರ ಪರಿಷ್ಕರಣೆಗಾಗಿ ಸಮಿತಿ ರೂಪಿಸುವ ಬಗ್ಗೆ ದೆಹಲಿ ಸರ್ಕಾರವು ಪ್ರಕಟಿಸಿದ್ದರೂ ಒಕ್ಕೂಟಗಳು ಅನಿರ್ದಿಷ್ಟಾವಧಿ ಮುಷ್ಕರ ಹಿಂಪಡೆಯಲು ನಿರಾಕರಿಸಿವೆ.

ಪ್ರತಿ ಕೆ.ಜಿ. ಸಿಎನ್‌ಜಿಗೆ ಸರ್ಕಾರವು (ಕೇಂದ್ರ ಮತ್ತು ರಾಜ್ಯ ) ₹35 ಸಬ್ಸಿಡಿ ನೀಡುವಂತೆ ಬೇಡಿಕೆ ಇಡಲಾಗಿದೆ. ಸಿಎನ್‌ಜಿ ದರದ ಮೇಲೆ ಸಬ್ಸಿಡಿ ನೀಡುವಂತೆ ಇತ್ತೀಚೆಗಷ್ಟೇ ದೆಹಲಿ ಕಾರ್ಯಾಲಯದ ಎದುರು ಆಟೊ, ಟ್ಯಾಕ್ಸಿ ಹಾಗೂ ಕ್ಯಾಬ್‌ ಚಾಲಕರು ಪ್ರತಿಭಟನೆ ನಡೆಸಿದ್ದರು.

ಪ್ರಸ್ತುತ ದೆಹಲಿಯಲ್ಲಿ ಪ್ರತಿ ಕೆ.ಜಿ. ಸಿಎನ್‌ಜಿ ದರ ₹71.61 ಇದೆ.

ದೆಹಲಿಯಲ್ಲಿ ಸುಮಾರು 90,000 ನೋಂದಾಯಿತ ಆಟೊಗಳು, 80,000ಕ್ಕೂ ಹೆಚ್ಚು ಟ್ಯಾಕ್ಸಿಗಳಿವೆ. ಮೆಟ್ರೊ ನಿಲ್ದಾಣಗಳಿಂದ ನಗರದ ಒಳಭಾಗಗಳಿಗೆ ಸಂಚಾರ ನಡೆಸಲು ಆಟೊ ಮತ್ತು ಟ್ಯಾಕ್ಸಿ ಪ್ರಮುಖ ಸಾರಿಗೆ ವ್ಯವಸ್ಥೆಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT