ಅಹಮದಾಬಾದ್: ಉದ್ಯಮಿ ಗೌತಮ್ ಅದಾನಿ ಅವರ ಪುತ್ರ ಜೀತ್ ಅದಾನಿ ಅವರ ನಿಶ್ಚಿತಾರ್ಥ ಮಾ.12 ಭಾನುವಾರ ನಡೆದಿದೆ.
ಜೀತ್ ಅವರು ವಜ್ರ ಹಾಗೂ ಚಿನ್ನಾಭರಣ ಉದ್ಯಮಿ ಜೈಮಿನ್ ಶಾ ಅವರ ಪುತ್ರಿ ದೀವಾ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮದುವೆ ದಿನಾಂಕದ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.
ಗೌತಮ್ ಅದಾನಿ ಅವರ ಅಹಮದಾಬಾದ್‌ನ ನಿವಾಸದಲ್ಲಿ ತೀರಾ ಖಾಸಗಿಯಾಗಿ ಈ ನಿಶ್ಚಿತಾರ್ಥ ಸಮಾರಂಭ ನೆರವೇರಿದೆ. ಜೀತ್ ಹಾಗೂ ದಿವಾ ಅವರ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಈ ನವಜೋಡಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದ್ದಾರೆ.
ಇನ್ನು ಜೀತ್ ಅವರು ಯುನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾದಿಂದ ಪದವಿ ಪಡೆದಿದ್ದು ಅವರು ಸದ್ಯ ಅದಾನಿ ಗ್ರೂಪ್ ಫೈನಾನ್ಸ್‌ನ ಉಪಾಧ್ಯಕ್ಷರಾಗಿದ್ದಾರೆ. ಇದಕ್ಕೂ ಮೊದಲು ಜೀತ್ ಅವರು ಅದಾನಿ ಗ್ರೂಪ್‌ನ ಸಿಒಒ ಆಫೀಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಈ ಕುರಿತು ಇಂಡಿಯಾ ಟುಡೇ ವರದಿ ಮಾಡಿದೆ.
ಗೌತಮ್ ಅವರ ಹಿರಿಯ ಪುತ್ರ ಹಾಗೂ ಅದಾನಿ ಸಮೂಹದ ಸಿಇಒ ಕರಣ್ ಅದಾನಿ ಅವರು ಮದುವೆಯಾಗಿದ್ದು, ಪರಿಧಿ ಶ್ರಾಫ್ ಅವರನ್ನು ವರಿಸಿದ್ದಾರೆ. ಷೇರು ಅವ್ಯವಹಾರದ ಆರೋಪದ ಮೇಲೆ ಅದಾನಿ ಗ್ರುಪ್ ಬಗ್ಗೆ ಇತ್ತೀಚೆಗೆ ವ್ಯಾಪಕ ಚರ್ಚೆಯಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.