ಮಂಗಳವಾರ, ಜನವರಿ 18, 2022
22 °C

ಲಸಿಕೆ ಪಡೆದು ಎಲ್‌ಇಡಿ ಟಿವಿ, ರೆಫ್ರಿಜರೇಟರ್, ವಾಷಿಂಗ್ ಮೆಶಿನ್ ಗೆಲ್ಲುವ ಅವಕಾಶ

ಪಿಟಿಐ Updated:

ಅಕ್ಷರ ಗಾತ್ರ : | |

ಹಿಂಗೋಲಿ: ಎಷ್ಟೇ ಅರಿವು ಮೂಡಿಸುವ ಪ್ರಯತ್ನಗಳನ್ನು ಪಟ್ಟರೂ ಸಹ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಜನರ ಹಿಂಜರಿಕೆ ಮುಂದುವರಿಯುತ್ತಲೇ ಇದೆ. ಹೀಗಾಗಿ, ಮಹಾರಾಷ್ಟ್ರದ ಹಿಂಗೋಲಿ ಪುರಸಭೆಯಲ್ಲಿ ಲಸಿಕೆ ಪಡೆದವರಿಗೆ ಎಲ್‌ಇಡಿ ಟಿ.ವಿ, ವಾಷಿಂಗ್ ಮೆಶಿನ್, ರೆಫ್ರಿಜರೇಟರ್ ಸೇರಿದಂತೆ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಗೆಲ್ಲುವ ಆಫರ್ ನೀಡಲಾಗಿದೆ.

ಚಂದ್ರಾಪುರ ಸ್ಥಳೀಯ ಸಂಸ್ಥೆಯಲ್ಲೂ ಜನರು ಲಸಿಕೆ ಪಡೆಯುವುದನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಇದೇ ರೀತಿಯ ಬಹುಮಾನದ ಘೋಷಣೆ ಮಾಡಲಾಗಿದೆ.

ಮುಂಬೈನಿಂದ 500 ಕಿ.ಮೀ ದೂರದಲ್ಲಿರುವ ಹಿಂಗೋಲಿ ಜಿಲ್ಲೆಯಲ್ಲಿ ಶೇ 73ರಷ್ಟು ಅರ್ಹ ಫಲಾನುಭವಿಗಳು ಕೋವಿಡ್ ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡಿದ್ದಾರೆ. ಶೇ 56ರಷ್ಟು ಜನರು ಎರಡೂ ಡೋಸ್ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಡ್ ಮೂರನೇ ಅಲೆಯ ಆತಂಕದ ನಡುವೆ ಬುಧವಾರ ತುರ್ತು ಸಭೆ ನಡೆಸಿದ ಹಿಂಗೋಲಿ ಡಿಸಿ ಜಿತೇಂದ್ರ ಪಾಪಲ್ಕರ್ ಹೆಚ್ಚು ಜನ ಲಸಿಕೆ ಪಡೆಯಲು ಉತ್ತೇಜಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪುರಸಭೆಯ ಅಧಿಕಾರಿ ಡಾ. ಅಜಯ್ ಕುರ್ವಾಡೆಯವರು ಲಕ್ಕಿ ಡ್ರಾ ಆಯೋಜನೆಯ ಉಪಾಯ ಮಾಡಿದ್ದಾರೆ. ಡಿಸೆಂಬರ್ 27ರಂದು ಲಕ್ಕಿ ಡ್ರಾ ನಡೆಯಲಿದ್ದು, ಡಿಸೆಂಬರ್ 2ರಿಂದ 24ರ ನಡುವೆ ಲಸಿಕೆ ಪಡೆದವರಿಗೆ ಲಕ್ಕಿ ಡ್ರಾ ಟಿಕೆಟ್ ಸಿಗಲಿದೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು