ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ನ ಸಂಸ್ಥೆ, ಸಿಕ್ಕಿಂನ ವಿನೋದ್‌ ಶರ್ಮಾಗೆ ಬೋಸ್ ಸ್ಮಾರಕ ಪ್ರಶಸ್ತಿ

Last Updated 23 ಜನವರಿ 2022, 11:46 IST
ಅಕ್ಷರ ಗಾತ್ರ

ನವದೆಹಲಿ: ಪ್ರಾಕೃತಿಕ ವಿಕೋಪ ನಿರ್ವಹಣೆಯಲ್ಲಿ ಉತ್ತಮ ಸಾಧನೆಗೆ ನೀಡುವ ‘ಸುಭಾಷ್ ಚಂದ್ರ ಬೋಸ್ ಅಪ್ಡಾ ಪ್ರಬಂಧನ್‌ ಪುರಸ್ಕಾರ್’ ಪ್ರಶಸ್ತಿಗೆ 2022ನೇ ಸಾಲಿಗೆ ಗುಜರಾತ್‌ ಪ್ರಾಕೃತಿಕ ವಿಕೋಪ ನಿರ್ವಹಣೆ ಸಂಸ್ಥೆ (ಜಿಐಡಿಎಂ) ಮತ್ತು ಸಿಕ್ಕಿಂ ಪ್ರಾಕೃತಿಕ ವಿಕೋಪ ಪ್ರಾಧಿಕಾರದ ಉಪಾಧ್ಯಕ್ಷ ವಿನೋದ್‌ ಶರ್ಮಾ ಅವರನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯವು ಹೇಳಿಕೆ ನೀಡಿದೆ.

ಪ್ರತಿವರ್ಷವು ಜನವರಿ 23ರಂದು ಈ ಪ್ರಶಸ್ತಿಯನ್ನು ಪ್ರಕಟಿಸಲಿದ್ದು, ಸಂಸ್ಥೆ ಮತ್ತು ವ್ಯಕ್ತಿಗತ ವಿಭಾಗದಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿ ಮೊತ್ತವು ಸಂಸ್ಥೆಗಳಿಗೆ ₹ 51 ಲಕ್ಷ, ವ್ಯಕ್ತಿಗಳಿಗೆ ₹ 5 ಲಕ್ಷ ನಗದು ಒಳಗೊಂಡಿದೆ. ಜೊತೆಗೆ ಪ್ರಮಾಣಪತ್ರ ನೀಡಲಾಗುತ್ತದೆ.

ಈ ವರ್ಷದ ಪ್ರಶಸ್ತಿಗಾಗಿ ಜುಲೈ 1, 2021ರ ನಂತರ ನಾಮನಿರ್ದೇಶನಗಳನ್ನು ಪರಿಗಣಿಸಿದ್ದು, ಒಟ್ಟು 243 ಪ್ರವೇಶಗಳು ಬಂದಿದ್ದವು. ಜಿಐಡಿಎಂ 2012ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಗುಜರಾತ್‌ನಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಪ್ರಾಕೃತಿಕ ವಿಕೋಪ ನಿರ್ವಹಣೆ ಕುರಿತಂತೆ ಸಾಮರ್ಥ್ಯ ವೃದ್ಧಿಗೆ ಸಂಸ್ಥೆ ಒತ್ತು ನೀಡುತ್ತಿದ್ದು, ಈವರೆಗೆ 12,000 ವೃತ್ತಿಪರರಿಗೆ ತರಬೇತಿ ನೀಡಿದೆ.ಸಾಂಕ್ರಾಮಿಕ ಪಿಡುಗು ಹಾಗೂ ಅಪಾಯದ ಸಂದರ್ಭದಲ್ಲಿ ನಿರ್ವಹಣೆ ತರಬೇತಿ ಒದಗಿಸಿದೆ ಎಂದು ಹೇಳಿಕೆಯು ವಿವರಣೆ ನೀಡಿದೆ.

ವೈಯಕ್ತಿಕ ವಿಭಾಗದಲ್ಲಿ ಆಯ್ಕೆಯಾಗಿರುವ ಶರ್ಮಾ ಅವರು ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆಯಲ್ಲಿ ಹಿರಿಯ ಪ್ರೊಫೆಸರ್ ಮತ್ತು ಸಿಕ್ಕಿಂ ರಾಜ್ಯ ಪ್ರಾಕೃತಿಕ ವಿಕೋಪ ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷರು. ಈಗಿನ ರಾಷ್ಟ್ರೀಯ ಪ್ರಾಕೃತಿಕ ವಿಕೋಪ ನಿರ್ವಹಣೆ ಸಂಸ್ಥೆಯ ಸ್ಥಾಪಕರೂ ಹೌದು ಎಂದು ವಿವರಿಸಿದೆ.

2019, 2020, 2021ನೇ ಸಾಲಿನ ಪುರಸ್ಕೃತರ ಜೊತೆಗೆ ಬೋಸ್‌ ಅವರ 125ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಸಚಿವಾಲಯದ ಹೇಳಿಕೆಯು ತಿಳಿಸಿದೆ.

‘ಭಾರತದಷ್ಟೇ ಬೋಸ್, ಸಿಂಗಪುರ ಇತಿಹಾಸದ ಭಾಗವೂ ಹೌದು’

ಸಿಂಗಪುರ:ನೇತಾಜಿ ಸುಭಾಷ್ ಚಂದ್ರ ಬೋಸ್‌ ಅವರು ಭಾರತದ ಇತಿಹಾಸದ ಭಾಗವಾಗಿರುವಷ್ಟೇ ಸಿಂಗಪುರದ ಇತಿಹಾಸದ ಭಾಗವೂ ಆಗಿದ್ದಾರೆ ಎಂದು ಇಲ್ಲಿನ ಪ್ರಮುಖ ಲೇಖಕ ಅಸಾದ್‌ ಲತೀಫ್‌ ಹೇಳಿದ್ದಾರೆ.

ಸಿಂಗಪುರದಲ್ಲಿ ನಡೆದ ಬೋಸ್ ಅವರ 125ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಸಿಂಗಪುರ ಸ್ಥಾಪಕರಲ್ಲಿ ಪ್ರಮುಖರಾದ ಸರ್ ಸ್ಟ್ಯಾನ್‌ಫೋರ್ಡ್ ರಾಫೆಲ್ಸ್ ಅವರಂತೆ, ಬೋಸ್ ಅವರು ಸಿಂಗಪುರ ಇತಿಹಾಸದ ಭಾಗವೇ ಆಗಿದ್ದಾರೆ ಎಂದು ಹೇಳಿದರು.

‘ಸ್ವತಂತ್ರ ಸಿಂಗಪುರ ಸ್ಥಾಪನೆಯಲ್ಲಿ ಭಾರತ ವಹಿಸಿದ್ದ ಪಾತ್ರದಲ್ಲಿ ಬೋಸ್‌ ಅವರು ಕೇಂದ್ರ ಸ್ಥಾನದಲ್ಲಿ ನಿಲ್ಲುತ್ತಾರೆ’ ಎಂದು ಹೇಳಿದರು. ಅವರು ‘ಸಿಂಗಪುರದಲ್ಲಿ ನೇತಾಜಿ ದಿನಗಳು’ ಕುರಿತ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

ಭಾರತದ ರಾಯಭಾರ ಕಚೇರಿಯು ವಿಚಾರಗೋಷ್ಠಿ ಆಯೋಜಿಸಿತ್ತು. ಇಲ್ಲಿ, ‘ಬೋಸ್ ಅವರ ಭಾರತೀಯ ರಾಷ್ಟ್ರೀಯ ಸೇನೆ (ಐಎನ್‌ಎ), ಆಗ್ನೇಯ ಭಾಗದ ಮಲಯ್‌ ಪೆನಿಸುಲಾದಲ್ಲಿ ನಿಜವಾದ ಅರ್ಥದಲ್ಲಿ ಸಾಮೂಹಿಕ ರಾಜಕಾರಣಕ್ಕೆ ಪ್ರೇರೆಪಣೆಯಾಗಿತ್ತು. ಬೋಸ್ ಅವರು ಕಾರ್ಮಿಕರ ಜೊತೆಗೂಡಿ ಕಾರ್ಯನಿರ್ವಹಿಸಿದ್ದು, ಆಗ್ನೇಯ ಏಷಿಯಾದ ಭಾರತೀಯರನ್ನು ಗೌರವಿಸುತ್ತಿದ್ದರು’ ಎಂಬ ಅಂಶವು ಉಲ್ಲೇಖವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT