ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶಿ ವಿಶ್ವನಾಥ ದೇಗುಲದ ಭದ್ರತೆ: ಸಿಐಎಸ್ಎಫ್ ಸಲಹೆ ಕೇಳಿದ ಸರ್ಕಾರ

Last Updated 11 ಸೆಪ್ಟೆಂಬರ್ 2022, 11:08 IST
ಅಕ್ಷರ ಗಾತ್ರ

ನವದೆಹಲಿ: ವಾರಾಣಸಿಯ ಕಾಶಿ ವಿಶ್ವನಾಥ ದೇವಸ್ಥಾನದ ಕಾರಿಡಾರ್‌ನಲ್ಲಿ ಸುರಕ್ಷತೆ ಮತ್ತು ಭದ್ರತೆ ಕುರಿತಂತೆಸರ್ಕಾರ ಸಿಐಎಸ್‌ಎಫ್‌ನ ವಿಶೇಷ ಭದ್ರತಾ ವಿಭಾಗದ ಸಲಹೆ ಪಡೆಯಲಿದೆ.

ಉತ್ತರ ಪ್ರದೇಶ ಸರ್ಕಾರದ ಮನವಿ ಆಧರಿಸಿ ಕೇಂದ್ರ ಗೃಹ ಸಚಿವಾಲಯ ಈಚೆಗೆ ಭದ್ರತೆ, ಸುರಕ್ಷತೆಗೆ ಅನುಸರಿಸಬೇಕಾದ ಕ್ರಮಗಳನ್ನು ಪರಿಶೀಲಿಸಲು ಸಿಐಎಸ್ಎಫ್‌ಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ವೃತ್ತಿಪರ ಭದ್ರತೆ ಮತ್ತು ಅಗ್ನಿಶಾಮಕ ಸೇವೆ ಕುರಿತು ಸಲಹೆ ಪಡೆಯಲಾಗುತ್ತದೆ. ಸಿಐಎಸ್‌ಎಫ್‌ ಪ್ರಸ್ತುತ ವಿವಿಧ ನಾಗರಿಕ ವಿವಿಧ ವಿಮಾನ ನಿಲ್ದಾಣಗಳು ಮತ್ತು ಆಯಕಟ್ಟಿನ ತಾಣಗಳ ಭದ್ರತಾ ಹೊಣೆ ನಿಭಾಯಿಸುತ್ತಿದೆ.

ಸಿಐಎಸ್‌ಎಫ್‌ನ ತಂಡವೊಂದು ಭದ್ರತೆ ಕುರಿತಂತೆ ಈಗಾಗಲೇ ಕಾಶಿ ವಿಶ್ವನಾಥ ದೇವಸ್ಥಾನದ ಪ್ರಾಂಗಣ ಹಾಗೂ ಅದಕ್ಕೆ ಹೊಂದಿಕೊಂಡ ಗಂಗಾ ನದಿ ಪಾತ್ರದಲ್ಲಿ ಸಮೀಕ್ಷೆ ಕಾರ್ಯವನ್ನು ಕೈಗೊಂಡಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT