ಮಂಗಳವಾರ, ಮೇ 17, 2022
30 °C
ವರ್ಷ ಅವಧಿಯಲ್ಲಿ ಮೌಲ್ಯದಲ್ಲಿ ₹ 1.99 ಲಕ್ಷ ಕೋಟಿ ಹೆಚ್ಚಳ

ಕೇಂದ್ರ ಹೊಂದಿರುವ ಆಸ್ತಿ ಮೌಲ್ಯ ₹ 18.90 ಲಕ್ಷ ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೇಂದ್ರ ಸರ್ಕಾರ ಹೊಂದಿರುವ ವಿವಿಧ ರೂಪದ ಆಸ್ತಿಗಳ ಮೌಲ್ಯ ₹ 18.90 ಲಕ್ಷ ಕೋಟಿ. ಈ ಆಸ್ತಿಯಲ್ಲಿ ಜಮೀನು, ಕಟ್ಟಡಗಳು, ಯಂತ್ರೋಪಕರಣಗಳು ಹಾಗೂ ವಾಹನಗಳು ಸೇರಿವೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ 2021–22ನೇ ಸಾಲಿನ ಬಜೆಟ್‌ನ ದಾಖಲೆಗಳ ಪ್ರಕಾರ ಕೇಂದ್ರದ ಸ್ವಾಧೀನದಲ್ಲಿರುವ ಈ ಆಸ್ತಿಗಳ ಮೌಲ್ಯ ಇನ್ನೂ ಅಧಿಕವಾಗುವುದು. 2019–20ನೇ ಹಣಕಾಸು ವರ್ಷದ ಕೊನೆಯಲ್ಲಿದ್ದ ಆಸ್ತಿಗಳ ಪೈಕಿ, ₹ 2 ಲಕ್ಷ ಹಾಗೂ ಅದಕ್ಕಿಂತ ಅಧಿಕ ಮೌಲ್ಯದ ಆಸ್ತಿಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

ಆದರೆ, ಕ್ಯಾಬಿನೆಟ್‌ ಸೆಕ್ರೆಟರಿಯೇಟ್‌, ಪ್ಯಾರಾ ಮಿಲಿಟರಿ ಪಡೆಗಳು, ರಕ್ಷಣಾ ಸಚಿವಾಲಯ, ಬಾಹ್ಯಾಕಾಶ ಮತ್ತು ಅಣುಶಕ್ತಿ ಇಲಾಖೆಗಳು ಹೊಂದಿರುವ ಸ್ವತ್ತುಗಳ ಮೌಲ್ಯ ಇದರಲ್ಲಿ ಸೇರಿಲ್ಲ ಎಂಬುದು ಗಮನಾರ್ಹ.

ಒಂದು ವರ್ಷದ ಅವಧಿಯಲ್ಲಿ ಆಸ್ತಿ ಮೌಲ್ಯದಲ್ಲಿ ₹ 1.99 ಲಕ್ಷ ಕೋಟಿ ಹೆಚ್ಚಳವಾಗಿದೆ. ಇನ್ನು, 2015–16 ರಿಂದ 2019–20ನೇ ಹಣಕಾಸು ವರ್ಷ ಅವಧಿಯನ್ನು ಪರಿಗಣಿಸಿದರೆ, ಆಸ್ತಿಯ ಮೌಲ್ಯದಲ್ಲಿ ಒಟ್ಟು ₹ 7.99 ಲಕ್ಷ ಕೋಟಿ ಹೆಚ್ಚಳವಾಗಿರುವುದು ಕಂಡು ಬರುತ್ತದೆ ಎಂದು ಇವೇ ಮೂಲಗಳು ಹೇಳಿವೆ.

ಕಟ್ಟಡಗಳು, ಜಮೀನು, ರಸ್ತೆ, ಸೇತುವೆಗಳಂತಹ ಭೌತಿಕ ಸ್ವತ್ತುಗಳ ಮೌಲ್ಯ ₹ 4.55 ಲಕ್ಷ ಕೋಟಿ. ಈ ಮೌಲ್ಯ 2019–20ನೇ ಹಣಕಾಸು ವರ್ಷದಲ್ಲಿ ₹ 4.35 ಲಕ್ಷ ಕೋಟಿ ಇತ್ತು.

ಇನ್ನು, ಷೇರುಗಳ ಮೌಲ್ಯ, ರಾಜ್ಯಗಳಿಗೆ, ವಿವಿಧ ರಾಷ್ಟ್ರಗಳಿಗೆ ನೀಡಿರುವ ಸಾಲದ ಮೊತ್ತ ₹ 13.88 ಲಕ್ಷ ಕೋಟಿ. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಷೇರುಗಳ ಮೌಲ್ಯ ₹ 4.53 ಲಕ್ಷ ಕೋಟಿಯಿಂದ  ₹ 5.37 ಲಕ್ಷ ಕೋಟಿಗೆ ಹೆಚ್ಚಳವಾಗಿರುವುದು ಬಜೆಟ್‌ ದಾಖಲೆಗಳಿಂದ ತಿಳಿದುಬರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು