ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌: ಕೋತಿಯನ್ನು ನುಂಗಿದ್ದ 11 ಅಡಿ ಹೆಬ್ಬಾವಿನ ರಕ್ಷಣೆ

Last Updated 10 ಆಗಸ್ಟ್ 2021, 7:20 IST
ಅಕ್ಷರ ಗಾತ್ರ

ಅಹಮದಾಬಾದ್‌: ಕೋತಿಯನ್ನು ನುಂಗಿದ್ದ11 ಅಡಿ ಉದ್ದದ ಹೆಬ್ಬಾವನ್ನು ಗುಜರಾತಿನ ವಡೋದರಾ ನಗರದ ಬಳಿಯ ನದಿ ತೀರದಲ್ಲಿ ರಕ್ಷಿಸಲಾಗಿದೆ ಎಂದು ಅರಣ್ಯ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ವಡೋದರಾ ಬಳಿಯ ವಾಸ್ನಾ–ಕೊಟಾರಿಯಾ ಹಳ್ಳಿಯ ನಡುವೆ ಹಾದು ಹೋಗುತ್ತಿದ್ದ ಈ ಬೃಹತ್‌ ಹೆಬ್ಬಾವನ್ನು ಸ್ಥಳೀಯರು ಗಮನಿಸಿದ್ದಾರೆ. ನಂತರ ಗ್ರಾಮಸ್ಥರು ಕರೆಲಿಬಾಗ್‌ ವ್ಯಾಪ್ತಿಯ ಅರಣ್ಯ ಕಚೇರಿಗೆ ಮಾಹಿತಿ ನೀಡಿದ್ದಾರೆ ಎಂದು ವನ್ಯಜೀವಿ ಸಂರಕ್ಷಕ ಶೈಲೇಶ್ ರಾವಲ್ ತಿಳಿಸಿದರು.

‘ಹಲವು ಪ್ರಯತ್ನಗಳ ನಂತರ, ನಮ್ಮ ತಂಡ ಹೆಬ್ಬಾವನ್ನು ಹಿಡಿಯುವವಲ್ಲಿ ಯಶಸ್ವಿಯಾಯಿತು. ನಾವು ಅದನ್ನು ಕರೆಲಿಬಾಗ್‌ನಲ್ಲಿರುವ ರಕ್ಷಣಾ ಕೇಂದ್ರಕ್ಕೆ ಕರೆತಂದೆವು. ನಂತರ ಹೆಬ್ಬಾವು ನುಂಗಿದ್ದ ಕೋತಿಯನ್ನು ಹೊರತೆಗೆಯಲಾಯಿತು‘ ಎಂದು ರಾವಲ್ ಸುದ್ದಿ ಸಂಸ್ಥೆಗೆ ತಿಳಿಸಿದರು.

ಹೆಬ್ಬಾವಿಗೆ ಚಿಕಿತ್ಸೆ ನೀಡಿದ್ದು ನಿಗಾದಲ್ಲಿಡಲಾಗಿದೆ. ಹಾವು ಆರೋಗ್ಯವಾಗಿದೆ ಎಂದು ಪಶುವೈದ್ಯರು ದೃಢಪಡಿಸಿದ ನಂತರ, ಕಾಡಿಗೆ ಬಿಡಲಾಗುವುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT