ಮುಂಬೈ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ವಾರ್ಷಿಕ ಮಹಾಸಭೆ ಇದೇ ತಿಂಗಳ 28ರಂದು ಇಲ್ಲಿ ನಡೆಯಲಿದ್ದು, ಹೊಸ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಚೇರ್ಮನ್ ಆಯ್ಕೆಯೂ ಅಂದೇ ನಡೆಯಲಿದೆ.

ಈ ಎರಡು ಸ್ಥಾನಕ್ಕೆ ಆಯ್ಕೆ ಸಭೆಯ ಪ್ರಮುಖ ಕಾರ್ಯಸೂಚಿಯಾಗಿದೆ. ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರು ಜುಲೈನಲ್ಲಿ 70ನೇ ವರ್ಷಕ್ಕೆ ಕಾಲಿಟ್ಟ ಕಾರಣ ಹುದ್ದೆ ತ್ಯಜಿಸಿದ್ದರು. ಅವರನ್ನು 2022ರ ಅಕ್ಟೋಬರ್ನಲ್ಲಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿತ್ತು. ಬಿಸಿಸಿಐ ನಿಯಮಾವಳಿ ಪ್ರಕಾರ 70 ವರ್ಷ ದಾಟಿದ ಯಾರೂ ಪದಾಧಿಕಾರಿಯಾಗಿ ಮುಂದುವರಿಯುತ್ತಿಲ್ಲ.

ಐಪಿಎಲ್ ಅಧ್ಯಕ್ಷರಾಗಿ ಎರಡು ಅವಧಿಗೆ (ಗರಿಷ್ಠ ಆರು ವರ್ಷ) ಅಧಿಕಾರದಲ್ಲಿದ್ದ ಕಾರಣ ಅವರು ಕಡ್ಡಾಯ ಕೂಲ್ಆಫ್ ನಿಯಮದಡಿ ಈ ಸ್ಥಾನದಲ್ಲಿ ಮುಂದುವರಿಯುವಂತಿಲ್ಲ.

ಉಳಿದ ಪದಾಧಿಕಾರಿಗಳು ತಮ್ಮ ಸ್ಥಾನದಲ್ಲಿ ಮುಂದುವರಿಯುವ ನಿರೀಕ್ಷೆಯಿದೆ. ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಅಧಿಕಾರ ವಹಿಸಿಕೊಂಡ ಬಳಿಕ ತೆರವಾದ ಬಿಸಿಸಿಐ ಕಾರ್ಯದರ್ಶಿ ಸ್ಥಾನಕ್ಕೆ ದೇವಜಿತ್ ಸೈಕಿಯಾ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ರೋಹನ್ ಗೌನ್ಸ್ ದೇಸಾಯಿ ಅವರು ಈ ವರ್ಷದ ಮಾರ್ಚ್ನಲ್ಲಿ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ಸೈಕಿಯಾ ಆಯ್ಕೆಯ ವೇಳೆ ಪ್ರಭತೇಜ್ ಭಾಟಿಯಾ ಅವರು ಖಜಾಂಚಿಯಾಗಿ ಆಯ್ಕೆಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.