ಮಹಾ ಸಿಎಂ ಮನೆ ಮುಂದೆ ಹನುಮಾನ್ ಚಾಲೀಸಾ ಪಠಿಸುವ ಸವಾಲು: ಪೊಲೀಸ್ ಕಟ್ಟೆಚ್ಚರ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸದ ಎದುರು ಹನುಮಾನ್ ಚಾಲೀಸಾ ಪಠಿಸುವುದಾಗಿ ಸಂಸದೆ ನವನೀತ್ ಕೌರ್ ಮತ್ತು ಆಕೆಯ ಪತಿ ಶಾಸಕ ರವಿ ರಾಣಾ ಸವಾಲು ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಂದ್ರಾದಲ್ಲಿರುವ ಮುಖ್ಯಮಂತ್ರಿಯವರ ಬಂಗಲೆ ಮತ್ತು ರಾಣಾ ದಂಪತಿಯ ಖಾರ್ ಪ್ರದೇಶದ ಫ್ಲಾಟ್ಗೆ ಭದ್ರತೆ ಹೆಚ್ಚಿಸಲಾಗಿದೆ.
ಮಹಾರಾಷ್ಟ್ರಕ್ಕೆ ಸಾಡೇಸಾತಿಯಿಂದ ವಿಮೋಚನೆ ಕೊಡಿಸಲು ಮುಖ್ಯಮಂತ್ರಿಗಳ ನಿವಾಸ ಮಾತೋಶ್ರೀ ಎದುರು ಹನುಮಾನ್ ಚಾಲೀಸಾ ಪಠಿಸುವುದಾಗಿ ಬದ್ನೇರಾ ಕ್ಷೇತ್ರದ ಪಕ್ಷೇತರ ಶಾಸಕ ರವಿ ರಾಣಾ ಮತ್ತು ಅಮರಾವತಿಯ ಪಕ್ಷೇತರ ಸಂಸದೆ ನವನೀತ್ ಕೌರ್ ರಾಣಾ ಸವಾಲು ಹಾಕಿದ್ದರು.
ಇದನ್ನೂ ಓದಿ.. ಉದ್ಧವ್ ಠಾಕ್ರೆ ಮನೆ ಸಮೀಪದಲ್ಲೇ ಬಿಜೆಪಿ ಕಾರ್ಯಕರ್ತನ ವಾಹನದ ಮೇಲೆ ದಾಳಿ
ಹೀಗಾಗಿ, ರಾತ್ರಿಯಿಂದಲೂ ನೂರಾರು ಶಿವಸೇನೆ ಕಾರ್ಯಕರ್ತರು ಮಾತೋಶ್ರೀಯ ಹೊರಗೆ ಜಮಾಯಿಸಿದ್ದರು. ರಾಣಾ ದಂಪತಿಯ ಫ್ಲಾಟ್ನ ಹೊರಗೂ ಒಂದು ಗುಂಪು ಮೊಕ್ಕಾಂ ಹೂಡಿದೆ. ತಮ್ಮ ಮನೆಯಿಂದ ಹರಡುವಂತೆ ರಾಣಾ ದಂಪತಿಗೆ ಸೂಚಿಸಿರುವ ಶಿವಸೇನೆ ಕಾರ್ಯಕರ್ತರು ಇಲ್ಲವಾದರೆ 'ಅಭಿಷೇಕ' ದೊಂದಿಗೆ ಸ್ವಾಗತ ಮತ್ತು 'ಮಹಾ ಪ್ರಸಾದ' ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಖುದ್ದು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಖೇರ್ವಾಡಿ ಪೊಲೀಸ್ ಠಾಣೆಯು ಐಪಿಸಿ ಸೆಕ್ಷನ್ 149 ರ ಅಡಿಯಲ್ಲಿ ರಾಣಾ ದಂಪತಿಗೆ ನೋಟಿಸ್ ನೀಡಿದೆ.
ಓದಿ... ಪತ್ನಿಗೆ ಸಂತಾನ ಭಾಗ್ಯ ಕರುಣಿಸಲು ಕೈದಿಗೆ 15 ದಿನ ಪೆರೋಲ್ ಮಂಜೂರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.