ಶುಕ್ರವಾರ, ಜುಲೈ 1, 2022
28 °C

ರಾಜ್ಯಸಭೆ ಚುನಾವಣೆಗೆ 5 ಅಭ್ಯರ್ಥಿಗಳು: ಎಎಪಿಯಿಂದ ಹರಭಜನ್, ಛಡ್ಡಾ ಕಣಕ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚಂಡೀಗಡ: ಇದೇ 31ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷದಿಂದ (ಎಎಪಿ) ಐವರು ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಮಾಜಿ ಕ್ರಿಕೆಟಿಗ ಹರಭಜನ್ ಸಿಂಗ್, ದೆಹಲಿಯ ಎಎಪಿ ಶಾಸಕ ರಾಘವ ಛಡ್ಡಾ, ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ ಸಂಸ್ಥಾಪಕ ಅಶೋಕ್ ಮಿತ್ತಲ್, ಐಐಟಿ ದೆಹಲಿಯ ಸಹಾಯಕ ಪ್ರಾಧ್ಯಾಪಕ ಸಂದೀಪ್ ಪಾಠಕ್ ಹಾಗೂ ಉದ್ಯಮಿ ಸಂಜೀವ್ ಅರೋರಾ ಅವರನ್ನು ಪಕ್ಷ ಹೆಸರಿಸಿದೆ. 

ಈ ಐವರು ಅಭ್ಯರ್ಥಿಗಳು ಪಂಜಾಬ್ ವಿಧಾನಸಭಾ ಸಂಕೀರ್ಣದಲ್ಲಿ ಸೋಮವಾರ ನಾಮಪತ್ರಗಳನ್ನು ಸಲ್ಲಿಸಿದರು.  ಛಡ್ಡಾ ಅವರು ದೆಹಲಿಯ ರಾಜಿಂದರ್ ನಗರದ ಶಾಸಕ. ಅರೋರಾ ಅವರು ಲೂಧಿಯಾನದ ಜವಳಿ ಉದ್ಯಮಿ.

ನಾಲ್ವರು ಹಿಂದೂಗಳು ಹಾಗೂ ಒಬ್ಬ ಸಿಖ್ ಸಮುದಾಯದ ಅಭ್ಯರ್ಥಿಯನ್ನು ರಾಜ್ಯಸಭೆಗೆ ಕಳಹಿಸಲು ಮುಂದಾಗಿರುವ ಎಎಪಿ ನಿರ್ಧಾರವನ್ನು ಕಾಂಗ್ರೆಸ್ ಮುಖಂಡ ಹಾಗೂ ಶಾಸಕ ಸುಖಪಾಲ್ ಖೈರಾ ಟೀಕಿಸಿದ್ದಾರೆ. ‘ಇದು ಪಂಜಾಬ್‌ನ ಪಾಲಿಗೆ ಬೇಸರದ ಸುದ್ದಿ. ಇದು ರಾಜ್ಯದ ಬಗ್ಗೆ ಎಎಪಿ ತಳೆದಿರುವ ಮೊದಲ ತಾರತಮ್ಯ ನೀತಿ’ ಎಂದಿದ್ದಾರೆ. ಪಂಜಾಬಿಗಳಲ್ಲದವರನ್ನು ನಾಮನಿರ್ದೇಶನ ಮಾಡಿದ್ದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಎಎಪಿ ನಾಮನಿರ್ದೇಶನವನ್ನು ಶಿರೋಮಣಿ ಅಕಾಲಿದಳದ ಮುಖಂಡ ಹರ್‌ಚರಣ್ ಬಿಯಾನ್ಸ್ ಸಹ ಟೀಕಿಸಿದ್ದಾರೆ. ‘ಪಂಜಾಬ್ ಸಂಪುಟ ರಚನೆಯಲ್ಲಿ ಜಾತಿ ಹಾಗೂ ಧರ್ಮ ಪ್ರಾತಿನಿಧ್ಯ ಚರ್ಚಾಸ್ಪದವಾಗಿದೆ. ಹಾಗೆಯೇ ರಾಜ್ಯಸಭೆಗೆ ಕಳುಹಿಸುತ್ತಿರುವ ನಾಲ್ವರ ಪೈಕಿ ಇಬ್ಬರು ಪಂಜಾಬಿಗಳಲ್ಲ. ಜಾಟರು, ದಲಿತರು, ಮುಸ್ಲಿಮರು, ಕ್ರಿಶ್ಚಿಯನ್ನರಿಗೆ ಆದ್ಯತೆ ನೀಡಿಲ್ಲ’ ಎಂದಿದ್ದಾರೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು