ನವದೆಹಲಿ: ‘ವಾಜಪೇಯಿ ಅವರ ಬಿಜೆಪಿಯ ಆಡಳಿತದಲ್ಲಿಬುಡಕಟ್ಟು ಜನಾಂಗದವರಿಗಾಗಿ ನನ್ನ ಎದುರಾಳಿ, ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗಿಂತಲೂ ನಾನು ಹೆಚ್ಚಿನ ಕೆಲಸ ಮಾಡಿದ್ದೇನೆ. ಈ ದಾಖಲೆಯ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದು ರಾಷ್ಟ್ರಪತಿ ಚುನಾವಣೆಯ ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ಗುರುವಾರ ಹೇಳಿದ್ದಾರೆ.

ಜಾರ್ಖಂಡ್ ರಾಜ್ಯಪಾಲೆ ಸೇರಿ ವಿವಿಧ ಹುದ್ದೆಗಳನ್ನು ನಿಭಾಯಿಸಿರುವ ದ್ರೌಪದಿ ಮುರ್ಮು ಅವರುಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ಸಮುದಾಯಗಳ ಕಲ್ಯಾಣಕ್ಕಾಗಿ ನೀಡಿರುವ ಕೊಡುಗೆಗಳು ಏನು ಎಂದು ಅವರು ಪ್ರಶ್ನಿಸಿದರು.

‘ನಾನು ಬುಡಕಟ್ಟು ಸಮುದಾಯದಲ್ಲಿ ಹುಟ್ಟಿಲ್ಲ ಎನ್ನುವುದನ್ನು ಬಿಟ್ಟರೆ, ವಾಜಪೇಯಿ ಸರ್ಕಾರದಲ್ಲಿ ಹಣಕಾಸು ಸಚಿವನಾಗಿದ್ದಾಗ ನಾನು ಹಿಂದುಳಿದ ಸಮುದಾಯಗಳು ಮತ್ತು ಬುಡಕಟ್ಟು ಜನಾಂಗದವರಿಗೆ ದ್ರೌಪದಿ ಅವರಿಗಿಂತಲೂ ಹೆಚ್ಚಿನ ಕೆಲಸ ಮಾಡಿರುವೆ’ ಎಂದು ಹೇಳಿದರು.

‘ವಾಜಪೇಯಿ ಅವರ ಬಿಜೆಪಿ ಜತೆಗೆ ಈಗಿನ ಬಿಜೆಪಿಯನ್ನು ಗುರುತಿಸಲಾಗದು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅಪಾಯವಿದೆ. ಈ ಬಾರಿಯ ಅಧ್ಯಕ್ಷೀಯ ಚುನಾವಣೆಯು ಅಸ್ತಿತ್ವದ ಹೋರಾಟವಲ್ಲ, ಆದರೆ, ಸಿದ್ಧಾಂತದ ಹೋರಾಟವಾಗಿದೆ’ ಎಂದು ಸಿನ್ಹಾ ಹೇಳಿದ್ದಾರೆ.

‘ಜೂನ್ 27ರಂದು ನಾಪಪತ್ರ ಸಲ್ಲಿಸಿದ ನಂತರ ಎಲ್ಲ ಪಕ್ಷಗಳ ನಾಯಕರನ್ನು ಮತ್ತು ಸಂಸದರನ್ನು ಭೇಟಿಯಾಗಿ, ಬೆಂಬಲ ಕೋರುವೆ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.