ಭಾನುವಾರ, ಜುಲೈ 3, 2022
24 °C

5 ಜಿ ತಂತ್ರಜ್ಞಾನ: ಜೂಹಿ ಚಾವ್ಲಾರ ಅರ್ಜಿ 'ಮಾಧ್ಯಮ ಪ್ರಚಾರಕ್ಕಾಗಿ' ಎಂದ ನ್ಯಾಯಾಲಯ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತದಲ್ಲಿ 5 ಜಿ ವೈರ್‌ಲೆಸ್ ನೆಟ್‌ವರ್ಕ್‌ಗಳನ್ನು ಸ್ಥಾಪಿಸುವುದರ ವಿರುದ್ಧ ನಟಿ-ಪರಿಸರವಾದಿ ಜೂಹಿ ಚಾವ್ಲಾ ಅವರು ಸಲ್ಲಿಸಿದ್ದ ಮೊಕದ್ದಮೆಯು 'ದೋಷಯುಕ್ತ' ಎಂದು ದೆಹಲಿ ಹೈಕೋರ್ಟ್ ಬುಧವಾರ ಹೇಳಿದೆ ಮತ್ತು ಇದನ್ನು 'ಮಾಧ್ಯಮ ಪ್ರಚಾರಕ್ಕಾಗಿ' ಸಲ್ಲಿಸಲಾಗಿದೆ ಎಂದು ಹೇಳಿದೆ.

ಅಲ್ಲದೆ 5ಜಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕಾಳಜಿಗಳ ಬಗ್ಗೆ ಸರ್ಕಾರಕ್ಕೆ ಯಾವುದೇ ವಿವರಣೆ ನೀಡದೆ ಮೊಕದ್ದಮೆ ಹೂಡಿದ್ದಕ್ಕಾಗಿ ನ್ಯಾಯಾಲಯ ಚಾವ್ಲಾ ಅವರನ್ನು ಪ್ರಶ್ನಿಸಿದೆ.

ನ್ಯಾಯಮೂರ್ತಿ ಜೆ.ಆರ್. ಮಿಧಾ ಅವರು, ಚಾವ್ಲಾ ಮತ್ತು ಇನ್ನಿಬ್ಬರು ತಮ್ಮ ಹಕ್ಕುಗಳಿಗಾಗಿ ಮೊದಲು ಸರ್ಕಾರವನ್ನು ಸಂಪರ್ಕಿಸಬೇಕಿತ್ತು ಮತ್ತು ಒಂದು ವೇಳೆ ಸರ್ಕಾರ ನಿರಾಕರಿಸಿದರೆ ಮಾತ್ರ ಅವರು ನ್ಯಾಯಾಲಯಕ್ಕೆ ಬರಬೇಕು ಎಂದಿದ್ದಾರೆ.

ವಿವಿಧ ಪಕ್ಷಗಳ ವಾದಗಳನ್ನು ಆಲಿಸಿದ ನಂತರ ಮೊಕದ್ದಮೆಯ ಆದೇಶವನ್ನು ಕಾಯ್ದಿರಿಸಿದ ನ್ಯಾಯಾಲಯ, 33 ಕಕ್ಷಿದಾರರನ್ನು ಏಕೆ ಮೊಕದ್ದಮೆಗೆ ಸೇರಿಸಲಾಗಿದೆ ಎಂದು ಕೇಳಿದೆ ಮತ್ತು ಕಾನೂನಿನಡಿಯಲ್ಲಿ ಅದನ್ನು ಅನುಮತಿಸಲಾಗುವುದಿಲ್ಲ ಎಂದು ಹೇಳಿದೆ.

'ಇದು ದೋಷಯುಕ್ತ ವಾದ. ಈ ಮೊಕದ್ದಮೆಯನ್ನು ಮಾಧ್ಯಮ ಪ್ರಚಾರಕ್ಕಾಗಿ ಮಾತ್ರ ಸಲ್ಲಿಸಲಾಗಿದೆ ಮತ್ತು ಅದಕ್ಕಿಂತ ಹೆಚ್ಚೇನೂ ಇಲ್ಲ. ಇದು ತುಂಬಾ ಆಘಾತಕಾರಿ' ಎಂದಿರುವ ನ್ಯಾಯಾಲಯ, 'ಸೂಕ್ತ ವಿವರಣೆಯೊಂದಿಗೆ ನೀವು ಸರ್ಕಾರವನ್ನು ಸಂಪರ್ಕಿಸಿದ್ದೀರಾ? ಹೌದು ಎಂದಾದರೆ, ಯಾವುದೇ ನಿರಾಕರಣೆ ಇದೆಯೇ?' ಎಂದು ಕೇಳಿದೆ.

ಚಾವ್ಲಾ, ಸಾಮಾಜಿಕ ಕಾರ್ಯಕರ್ತ ವೀರೇಶ್ ಮಲಿಕ್ ಮತ್ತು ತೀನಾ ವಚಾನಿ ಸಲ್ಲಿಸಿದ್ದ ಮೊಕದ್ದಮೆಯಲ್ಲಿ, 5 ಜಿಯನ್ನು ಜಾರಿಗೆ ತರಲು ದೂರಸಂಪರ್ಕ ಉದ್ಯಮವು ಯೋಜನೆ ರೂಪಿಸಿದ್ದರೆ, ಯಾವುದೇ ವ್ಯಕ್ತಿ, ಪ್ರಾಣಿ, ಪಕ್ಷಿ, ಕೀಟ ಮತ್ತು ಭೂಮಿಯ ಮೇಲಿನ ಯಾವುದೇ ಸಸ್ಯಗಳು ಈ ವಿಕಿರಣಕ್ಕೆ ಒಡ್ಡಿಕೊಳ್ಳುವುದನ್ನು ತಪ್ಪಿಸಲು ಸಾಧ್ಯವಾಗುವುದಿಲ್ಲ, ದಿನದ 24 ಗಂಟೆಗಳು, ವರ್ಷದ 365 ದಿನಗಳು, ಆರ್‌ಎಫ್‌ ವಿಕಿರಣದ ಮಟ್ಟವು ಇಂದು ಅಸ್ತಿತ್ವದಲ್ಲಿರುವುದಕ್ಕಿಂತ 10x ರಿಂದ 100x ಪಟ್ಟು ಹೆಚ್ಚಾಗಿರುತ್ತದೆ ಎಂದು ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು