ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಎಸ್‌ಇ ಫಲಿತಾಂಶ: ಎನ್‌ಜಿಒಗೆ ದೆಹಲಿ ಹೈಕೋರ್ಟ್‌ ತರಾಟೆ

Last Updated 30 ಜೂನ್ 2021, 11:07 IST
ಅಕ್ಷರ ಗಾತ್ರ

ನವದೆಹಲಿ: ಫಲಿತಾಂಶ ಅಂತಿಮಗೊಳಿಸುವ ಮೊದಲು 10 ನೇ ತರಗತಿ ವಿದ್ಯಾರ್ಥಿಗಳಿಗೆ ಆಂತರಿಕ ಮೌಲ್ಯಮಾಪನ ಆಧಾರದ ಮೇಲೆ ಅಂಕ ನೀಡಿರುವ ದಾಖಲೆಗಳನ್ನು ತಮ್ಮ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಲು ಸಿಬಿಎಸ್‌ಇ ಶಾಲೆಗಳಿಗೆ ನಿರ್ದೇಶಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ಸ್ವಯಂ ಸೇವಾ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡ ದೆಹಲಿ ಹೈಕೋರ್ಟ್‌, ‘ಪ್ರಚಾರ‘ಕ್ಕಾಗಿ ಕೊನೆಗಳಿಗೆಯಲ್ಲಿ ಇಂಥ ಪ್ರಯತ್ನಗಳನ್ನು ಮಾಡುತ್ತೀರಿ ಎಂದು ಹೇಳಿದೆ.

‘ಸ್ವಯಂ ಸೇವಾ ಸಂಸ್ಥೆಗಳು ವಾಣಿಜ್ಯ ಉದ್ದೇಶಗಳೊಂದಿಗೆ ದಾವೆ ಹೂಡುವವರಂತೆ ನಡೆದುಕೊಳ್ಳಬಾರದು ಮತ್ತು ಉನ್ನತ ಸ್ಥಾನದಲ್ಲಿದ್ದು, ಗೌರವಯುತವಾಗಿ ನಡೆದುಕೊಳ್ಳಬೇಕು‘ ಎಂದು ಹೈಕೋರ್ಟ್‌ ಹೇಳಿದೆ.

ಸಿಬಿಎಸ್‌ಇ ಫಲಿತಾಂಶದ ಪ್ರಕರಣದ ವಿಚಾರಣೆಗಾಗಿ ರಚಿಸಲಾಗಿದ್ದ ನ್ಯಾಯಮೂರ್ತಿಗಳಾದ ಮನಮೋಹನ್ ಮತ್ತು ನವೀನ್ ಚಾವ್ಲಾ ಅವರ ರಜಾಕಾಲದ ಪೀಠ, ‘ನೀವು ಕೊನೆ ಗಳಿಗೆಯಲ್ಲಿ ಬಂದು, ಗೆಲ್ಲುತ್ತೀವಿ ಎಂದು ಭಾವಿಸಿದ್ದೀರಿ. ಇದೆಲ್ಲ ಪ್ರಚಾರದ ಸಾಹಸ. ತುಂಬಾ ಕೆಟ್ಟ ಅಭಿರುಚಿ ಕೂಡ. ನೀವು ನಮ್ಮೊಂದಿಗೆ ನಡೆದುಕೊಳ್ಳುತ್ತಿರುವ ರೀತಿಯೂ ಸರಿ ಇಲ್ಲ. ನೀವೊಬ್ಬ ಖಾಸಗಿ ದಾವೆದಾರರಂತೆ ವರ್ತಿಸಬೇಕು. ನೀವು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳನ್ನು ಸಲ್ಲಿಸುತ್ತೀರಿ, ಹಾಗಾಗಿ ನೀವು ಸಾಮಾನ್ಯರಂತೆ ವರ್ತಿಸಲು ಸಾಧ್ಯವಿಲ್ಲ. ನಿಮ್ಮ ಸಮರ್ಥನೆ ಗಟ್ಟಿಯಾಗಿರಬೇಕು‘ ಎಂದು ಹೇಳಿತು.

ಈ ಪ್ರಕರಣ ಕುರಿತು ಕೆಲವು ಸಮಯ ವಾದ–ಪ್ರತಿವಾದಗಳು ನಡೆದ ನಂತರ, ಜಸ್ಟೀಸ್‌ ಫಾರ್‌ ಆಲ್‌‘ ಸ್ವಯಂ ಸೇವಾ ಸಂಸ್ಥೆ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಹಿಂದಕ್ಕೆ ಪಡೆಯುವುದಾಗಿ ಹೇಳಿದರು. ಇದಕ್ಕೆ ನ್ಯಾಯಾಲಯ ಅನುಮತಿ ನೀಡಿತು.

ಅಲ್ಲದೆ ಆಗಸ್ಟ್‌ನಲ್ಲಿ ವಿಚಾರಣೆಗೆ ನಿಗದಿಯಾಗಿರುವ ಮುಖ್ಯ ಅರ್ಜಿಯ ವಿಚಾರಣೆಯನ್ನು ಶೀಘ್ರ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಲು ಅವಕಾಶ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT