ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆ: ಆರೋಗ್ಯ ಕಾರ್ಯಕರ್ತರು, 65 ವರ್ಷ ಮೇಲ್ಪಟ್ಟವರಿಗೆ ಆದ್ಯತೆ

ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್
Last Updated 19 ನವೆಂಬರ್ 2020, 10:03 IST
ಅಕ್ಷರ ಗಾತ್ರ

ನವದೆಹಲಿ: ಮುಂದಿನ ವರ್ಷದ ಜುಲೈ – ಆಗಸ್ಟ್‌ ವೇಳೆಗೆ ಸುಮಾರು 50 ಕೋಟಿ ಡೋಸೇಜ್‌ನಷ್ಟು ‘ಕೋವಿಡ್‌ 19‘ಗೆ ಲಸಿಕೆ ಲಭ್ಯವಾಗುವ ಸಾಧ್ಯತೆಯಿದ್ದು, ಆದ್ಯತೆಯ ಮೇರೆಗೆ ಆರೋಗ್ಯ ಕಾರ್ಯಕರ್ತರು ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಲಸಿಕೆ ನೀಡಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ತಿಳಿಸಿದರು.

‘ದಿ ಶಿಫ್ಟಿಂಗ್ ಹೆಲ್ತ್‌ಕೇರ್‌ ಪ್ಯಾರಾಡಿಗ್ಮ ಡ್ಯೂರಿಂಗ್ ಮತ್ತು ಪೋಸ್ಟ್ ಕೋವಿಡ್‌‘ ಕುರಿತು ಎಫ್‌ಸಿಸಿಐ ಎಫ್‌ಎಎಲ್‌ಒ ಗುರುವಾರ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಮಾತನಾಡಿದ ಅವರು, ‘ಮೊದಲು ಕೊರೊನಾ ವಾರಿಯರ್‌ಗಳಾಗಿರುವ ಆರೋಗ್ಯ ಕಾರ್ಯಕರ್ತರಿಗೆ ಹಾಗೂ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ, ನಂತರ 50 ರಿಂದ 65 ವರ್ಷದೊಳಗಿನವರಿಗೆ ಲಸಿಕೆ ನೀಡಲಾಗುತ್ತದೆ‘ ಎಂದರು.

‘ಮುಂದಿನ ಹಂತದಲ್ಲಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ, ಆರೋಗ್ಯ ತಪಾಸಣೆ ಮಾಡಿ ಲಸಿಕೆ ಹಾಕಲಾಗುತ್ತದೆ. ವೈಜ್ಞಾನಿಕವಾಗಿ ಲಸಿಕೆ ಸರಬರಾಜು ಮಾಡಲು ಅಗತ್ಯವಾದ ಸಿದ್ಧತೆ ನಡೆಸಿದ್ದೇವೆ. ಲಸಿಕೆ ಪೂರೈಕೆಗಾಗಿ ನಿಖರವಾದ ಯೋಜನೆ ರೂಪಿಸಲಾಗುತ್ತಿದೆ. ಈ ಸಂಬಂಧ ಮುಂದಿನ ವರ್ಷದ ಮಾರ್ಚ್‌–ಏ‍ಪ್ರಿಲ್‌ ತಿಂಗಳಿಂದ ಕೈಗೊಳ್ಳಬೇಕಾದ ಕಾರ್ಯಗಳಿಗೆ ಈಗಲೇ ಸಿದ್ಧತೆ ನಡೆಸುತ್ತಿದ್ದೇವೆ‘ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT