ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಬಜೆಟ್‌: ಪಶ್ಚಿಮ ಬಂಗಾಳಕ್ಕೆ ₹6,636 ಕೋಟಿ

Last Updated 4 ಫೆಬ್ರುವರಿ 2021, 16:59 IST
ಅಕ್ಷರ ಗಾತ್ರ

ನವದೆಹಲಿ: ‘ಈ ಬಾರಿಯ ರೈಲ್ವೆ ಬಜೆಟ್‌ನಲ್ಲಿ ಪಶ್ಚಿಮ ಬಂಗಾಳಕ್ಕೆ ₹6,636 ಕೋಟಿ ನಿಗದಿಪಡಿಸಲಾಗಿದೆ. ಇದು ಭಾರತೀಯ ರೈಲ್ವೆ ಇತಿಹಾಸದಲ್ಲೇ ಆ ರಾಜ್ಯಕ್ಕೆ ಮೀಸಲಿಟ್ಟ ಅತಿ ಹೆಚ್ಚಿನ ಅನುದಾನವಾಗಿದೆ’ ಎಂದು ರೈಲ್ವೆ ಸಚಿವ ಪಿಯೂಷ್‌ ಗೊಯಲ್‌ ತಿಳಿಸಿದ್ದಾರೆ.

‘2009–2014ರ ನಡುವಣ ಬಜೆಟ್‌ನಲ್ಲಿ ನಿಗದಿಪಡಿಸಿದ್ದ ಸರಾಸರಿ ಅನುದಾನಕ್ಕಿಂತಕ್ಕೂ 2.5ಪಟ್ಟು ಹೆಚ್ಚು ಮತ್ತು ಕಳೆದ ವರ್ಷಕ್ಕಿಂತಲೂ ಶೇಕಡ 26ರಷ್ಟು ಹೆಚ್ಚು’ ಎಂದು ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಪಶ್ಚಿಮ ಬಂಗಾಳದಲ್ಲಿ ರೈಲ್ವೆ ಜಾಲವನ್ನು ಉತ್ತಮ ಪಡಿಸಲು ಹಿಂದಿನ ರಾಜ್ಯ ಸರ್ಕಾರಗಳು ಆಸಕ್ತಿ ವಹಿಸಿಲ್ಲ. ರಾಜ್ಯ ಸರ್ಕಾರದಿಂದಾಗಿಯೇ ಯೋಜನೆಗಳು ಅಪೂರ್ಣ ಸ್ಥಿತಿಯಲ್ಲಿವೆ. ಮೊದಲಿನ ಎಡಪಕ್ಷಗಳ ಸರ್ಕಾರ ಮತ್ತು ಈಗಿನ ಟಿಎಂಸಿ ಸರ್ಕಾರ ರೈಲ್ವೆ ಯೋಜನೆಗಳಿಗೆ ಭೂಮಿ ನೀಡಲು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಈ ರಾಜ್ಯದಲ್ಲಿ 45 ವರ್ಷಗಳ ಹಿಂದಿನ ಯೋಜನೆಗಳು ಸಹ ಇನ್ನೂ ಪೂರ್ಣಗೊಂಡಿಲ್ಲ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT