ಏಕರೂಪದ ನಾಗರಿಕ ಸಂಹಿತೆ ಈ ಹೊತ್ತಿನ ಅಗತ್ಯ: ಕೇಂದ್ರ ಸಚಿವ ಗಿರಿರಾಜ್ ಸಿಂಗ್

ನವದೆಹಲಿ: ‘ಏಕರೂಪದ ನಾಗರಿಕ ಸಂಹಿತೆ ಈ ಹೊತ್ತಿನ ಅಗತ್ಯವಾಗಿದೆ. ಈ ಕುರಿತು ಸಂಸತ್ತು ಮತ್ತು ಸಾರ್ವತ್ರಿಕವಾಗಿ ಚರ್ಚೆ ಆಗಬೇಕಾಗಿದೆ’ ಎಂದು ಕೇಂದ್ರ ಸಚಿವ, ಬಿಜೆಪಿ ಮುಖಂಡ ಗಿರಿರಾಜ್ ಸಿಂಗ್ ಶುಕ್ರವಾರ ಪ್ರತಿಪಾದಿಸಿದರು.
ಕರ್ನಾಟಕದಲ್ಲಿ ಆರಂಭವಾದ ಹಿಜಾಬ್ ವಿವಾದ ದೇಶವ್ಯಾಪಿ ಚರ್ಚೆಗೊಳಪಟ್ಟಿರುವ ಹೊತ್ತಿನಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಸಚಿವರು, ‘ಹಿಜಾಬ್ ಕುರಿತ ಬೆಳವಣಿಗೆಗಳು ಕಳವಳಕಾರಿಯಾದುದು, ದೇಶದಲ್ಲಿ ಒಟ್ಟು ವಾತಾವರಣ ಹಾಳುಗೆಡಹುತ್ತಿದೆ’ ಎಂದು ಬಣ್ಣಿಸಿದರು.
ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ಧಾರಣೆಗೆ ನಿಷೇಧ: ಹೈಕೋರ್ಟ್ ಮಧ್ಯಂತರ ಆದೇಶ
‘ಕೆಲ ಮತ ಮಧ್ಯಸ್ಥಿಕೆದಾರರು ಇದ್ದಾರೆ. ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಇಂತಹ (ಹಿಜಾಬ್) ಅತಾರ್ಕಿಕವಾದ ಬೇಡಿಕೆಗಳನ್ನು ಬೆಂಬಲಿಸುತ್ತಿದ್ದಾರೆ. ಇಂಥವರು ಮತಕ್ಕಾಗಿ ಅಮಾಯಕ ಮಕ್ಕಳ ಜೀವನದ ಜೊತೆಗೆ ಚೆಲ್ಲಾಟ ಆಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಏಕರೂಪದ ನಾಗರಿಕ ಸಂಹಿತೆ ಈ ಹೊತ್ತಿನ ಅಗತ್ಯವಾಗಿದೆ. ರಸ್ತೆಗಳಿಂದ ಸಂಸತ್ತಿನವರೆಗೆ ಈ ಬಗ್ಗೆ ಚರ್ಚೆ ಆಗಬೇಕಾಗಿದೆ’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.