ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾದಲ್ಲಿ ಮತ್ತೊಬ್ಬ ತನಿಖಾ ಪತ್ರಕರ್ತನ ಮನೆ ಮೇಲೆ ಪೊಲೀಸ್‌ ದಾಳಿ

Last Updated 28 ಜುಲೈ 2021, 12:24 IST
ಅಕ್ಷರ ಗಾತ್ರ

ಮಾಸ್ಕೋ: ತನಿಖಾ ಮಾಧ್ಯಮವೊಂದರ ಮುಖ್ಯ ಸಂಪಾದಕರ ಮನೆಯ ಮೇಲೆರಷ್ಯಾ ಪೊಲೀಸರು ದಾಳಿ ನಡೆಸಿದ್ದು, ದೇಶದ ಸಂಸತ್ತಿಗೆ ಸೆಪ್ಟೆಂಬರ್‌ನಲ್ಲಿ ನಡೆಯುವ ಚುನಾವಣೆಯ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ.

‘ದಿ ಇನ್ಸೈಡರ್‌‘ನ್ಯೂಸ್ ಸೈಟ್‌ನ ಮುಖ್ಯ ಸಂಪಾದಕ ರೋಮನ್ ಡೊಬ್ರೊಖೋಟೊವ್ ಅವರು ಸ್ವತಃ ಈ ಮಾಹಿತಿ ನೀಡಿದ್ದು, ಬುಧವಾರ ಬೆಳಿಗ್ಗೆ ತಮ್ಮ ಅಪಾರ್ಟ್‌ಮೆಂಟ್‌ನ ಬಾಗಿಲನ್ನು ಪೊಲೀಸರು ಬಡಿಯುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಅವರನ್ನು ಪುಟಿನ್‌ ಸರ್ಕಾರ ಇತ್ತೀಚೆಗೆ ‘ವಿದೇಶಿ ದಲ್ಲಾಳಿ’ ಎಂಬ ಹೆಸರಿಸಿತ್ತು.

ಸೆಪ್ಟೆಂಬರ್‌ನಲ್ಲಿ ನಡೆಯುವ ಮತದಾನಕ್ಕೆ ಮುಂಚಿತವಾಗಿ ರಷ್ಯಾದ ವಿರೋಧ ಪಕ್ಷದ ಬೆಂಬಲಿಗರು, ಸ್ವತಂತ್ರ ಪತ್ರಕರ್ತರು ಮತ್ತು ಮಾನವ ಹಕ್ಕುಗಳ ಹೋರಾಟಗಾರರ ಮೇಲೆ ಸರ್ಕಾರದಿಂದ ಒತ್ತಡ ಹೆಚ್ಚಿಸುವ ಪ್ರಯತ್ನಗಳು ನಡೆಯುತ್ತಿವೆ. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು 2024ರ ಅಧ್ಯಕ್ಷೀಯ ಚುನಾವಣೆಗೆ ಮುನ್ನ ತಮ್ಮ ಆಡಳಿತ ಭದ್ರಗೊಳಿಸುವ ಪ್ರಯತ್ನಗಳ ಭಾಗವಾಗಿ ಇದು ನಡೆದಿದೆ ಎಂದು ಹೇಳಲಾಗುತ್ತಿದೆ.

ಸರ್ಕಾರವು ಈಚೆಗೆ ಹಲವು ಸ್ವತಂತ್ರ ಮಾಧ್ಯಮಗಳು ಮತ್ತು ಪತ್ರಕರ್ತರಿಗೆ ‘ವಿದೇಶಿ ಏಜೆಂಟರು’ ಎಂಬ ಹಣೆಪಟ್ಟಿ ಹಚ್ಚಿದೆ.ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಅಧಿಕಾರದಲ್ಲಿರುವ ಪುಟಿನ್‌ ಅವರು ಕಳೆದ ವರ್ಷ ತಂದಿರುವ ಸಾಂವಿಧಾನಿಕ ಬದಲಾವಣೆಗಳು, 2036 ರವರೆಗೆ ಅಧಿಕಾರ ಉಳಿಸಿಕೊಳ್ಳಲು ಅವರಿಗೆ ಅವಕಾಶ ಮಾಡಿಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT