ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ, ಇಂದಿನಿಂದ ನೋಂದಣಿ–ಇಲ್ಲಿದೆ ಮಾಹಿತಿ

18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವ ಕಾರ್ಯಕ್ರಮ
Last Updated 28 ಏಪ್ರಿಲ್ 2021, 2:49 IST
ಅಕ್ಷರ ಗಾತ್ರ

ದೇಶದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್‌ ಲಸಿಕೆ ನೀಡುವ ಲಸಿಕೆ ಕಾರ್ಯಕ್ರಮವು ಮೇ 1ರಿಂದ ಆರಂಭವಾಗಲಿದೆ. ಲಸಿಕೆ ಪಡೆಯಲು ಇಂದಿನಿಂದಲೇ (ಏಪ್ರಿಲ್ 28) ನೋಂದಣಿ ಮಾಡಿಕೊಳ್ಳಬಹುದು. ಸರ್ಕಾರಿ ಆಸ್ಪತ್ರೆಯಾದರೂ, ಖಾಸಗಿ ಆಸ್ಪತ್ರೆಯಾದರೂ ಕೋವಿನ್ ಜಾಲತಾಣದಲ್ಲಿ, ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ.

ಲಸಿಕೆ ಪಡೆಯಲು ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆ

1. ಕೋವಿನ್ ಜಾಲತಾಣದಲ್ಲಿ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆ ನಮೂದಿಸಬೇಕು. ಒಂದು ಬಾರಿಯ ಪಾಸ್‌ವಾರ್ಡ್ (ಒಟಿಪಿ) ಬರುವವರೆಗೆ ಕಾಯಬೇಕು.

2. ಒಟಿಪಿ ಬಂದ ನಂತರ ಅದನ್ನು ನಮೂದಿಸಬೇಕು. ನಂತರ ವೈಯಕ್ತಿಕ ವಿವರಗಳನ್ನು ದಾಖಲಿಸಬೇಕು.

3. ಕೋವಿನ್ ಪೋರ್ಟಲ್‌ನಲ್ಲಿ ಚಿತ್ರವಿರುವ ಗುರುತಿನ ಚೀಟಿಯನ್ನು ಅಪ್‌ಲೋಡ್ ಮಾಡಬೇಕು. ಆಧಾರ್‌ ಚೀಟಿ, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್‌, ಚಾಲನಾ ಪರವಾನಗಿ, ಪ್ಯಾನ್‌ ಕಾರ್ಡ್‌ ಅನ್ನು ಇದಕ್ಕೆ ಬಳಸಬಹುದು.

4. ನಂತರ ಲಸಿಕೆ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬೇಕು. ಅದು ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆ ಯಾವುದಾದರೂ ಆಗಿರಬಹುದು

5. ಲಸಿಕೆ ಪಡೆಯಬೇಕಿರುವ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿಕೊಳ್ಳಬೇಕು. ಆಯ್ಕೆ ಮಾಡಿಕೊಂಡ ದಿನಾಂಕ ಮತ್ತು ಸಮಯದಂದು ಲಸಿಕೆ ಹಾಕಿಸಿಕೊಳ್ಳಲು ಅಲ್ಲಿ ಅವಕಾಶ ಇಲ್ಲದೇ ಇದ್ದರೆ ಬೇರೆ ಲಸಿಕಾ ಕೇಂದ್ರವನ್ನು ಆಯ್ಕೆ ಮಾಡಿಕೊಂಡು ಪರಿಶೀಲಿಸಬೇಕು

6: ಲಸಿಕೆ ಪಡೆಯುವ ದಿನಾಂಕ ಮತ್ತು ಸಮಯ ನಿಗದಿಯಾದ ಪತ್ರವು ಜನರೇಟ್ ಆಗುತ್ತದೆ. ಅದರಲ್ಲಿ ನಮೂದಾಗಿರುವ ದಿನಾಂಕ ಮತ್ತು ಸಮಯದಂದು ಲಸಿಕಾ ಕೇಂದ್ರಕ್ಕೆ ಹೋಗಿ, ಲಸಿಕೆ ಹಾಕಿಸಿಕೊಳ್ಳಬೇಕು. ಜತೆಗೆ ಗುರುತಿನ ಚೀಟಿ ತೆಗೆದುಕೊಂಡು ಹೋಗಬೇಕು

ಕೋವಿನ್‌ ಜಾಲತಾಣ: https://www.cowin.gov.in/home

ಗಮನದಲ್ಲಿ ಇರಬೇಕಾದ ಅಂಶಗಳು

* ಲಸಿಕೆ ಹಾಕಿಸಿಕೊಳ್ಳಲು ನಿಗದಿಯಾದ‌ ದಿನದಂದು ನಿಗದಿತ ಅವಧಿಯಲ್ಲಿ ಲಸಿಕೆ ಪಡೆಯಲು ಸಾಧ್ಯವಾಗದೇ ಇದ್ದರೆ, ಬೇರೆ ಸಮಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ನಿಗದಿತ ದಿನಕ್ಕಿಂತ ಒಂದು ದಿನ ಮೊದಲು ಇದನ್ನು ಬದಲಿಸಬೇಕು. ನಿಗದಿತ ಅವಧಿಯಲ್ಲಿ ಲಸಿಕೆ ಪಡೆಯಲು ಸಾಧ್ಯವಾಗದೇ ಇದ್ದರೆ, ನಂತರದ ದಿನಗಳಲ್ಲಿ ಲಭ್ಯವಿರುವ ಸಮಯವನ್ನು ಆಯ್ಕೆ ಮಾಡಿಕೊಳ್ಳಬೇಕು

* ಎರಡನೇ ಡೋಸ್‌ ಪಡೆಯಲು ಮತ್ತೆ ನೋಂದಣಿ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಮೊದಲ ಡೋಸ್‌ ಪಡೆದ ದಿನ ಮತ್ತು ಸಮಯಕ್ಕೆ ಅನುಗುಣವಾಗಿ, ಎರಡನೇ ಡೋಸ್‌ ಪಡೆಯುವ ದಿನ ಮತ್ತು ಸಮಯ ಸ್ವಯಂಚಾಲಿತವಾಗಿ ನಿಗದಿ ಆಗುತ್ತದೆ. ಈ ಬಗ್ಗೆ ಸಂದೇಶ ಬರುತ್ತದೆ

* ಒಂದು ಲಾಗಿನ್ ಐಡಿಯಲ್ಲಿ ಗರಿಷ್ಠ ನಾಲ್ಕು ಜನರು ಲಸಿಕೆ ಪಡೆಯಲು ನೋಂದಣಿ ಮಾಡಿಕೊಳ್ಳಬಹುದು. ಆದರೆ, ನೋಂದಣಿ ಮಾಡಿಕೊಳ್ಳುವವರ ಗುರುತಿನ ಚೀಟಿಯನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಲೇಬೇಕು

* ಕೋವಿನ್ ಪೋರ್ಟಲ್ ಅಲ್ಲದೆ, ಲಸಿಕಾ ಕೇಂದ್ರದಲ್ಲೇ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ

* ಲಸಿಕೆ ಪಡೆದ ಒಂದು ತಿಂಗಳವರೆಗೂ ರಕ್ತದಾನ ಮಾಡುವ ಹಾಗಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT