ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಈಗ ಶಿಕ್ಷಣ ಸಚಿವಾಲಯ: ರಾಷ್ಟ್ರಪತಿ ಅಂಕಿತ

Last Updated 18 ಆಗಸ್ಟ್ 2020, 1:35 IST
ಅಕ್ಷರ ಗಾತ್ರ

ನವದೆಹಲಿ: ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವನ್ನು (ಎಂಎಚ್‌ಆರ್‌ಡಿ) ಶಿಕ್ಷಣ ಸಚಿವಾಲಯವಾಗಿ ಮರುನಾಮಕರಣ ಮಾಡಲು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸೋಮವಾರ ಸಮ್ಮತಿ ನೀಡಿದ್ದಾರೆ. ಈ ಕುರಿತು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಕರಡಿನಲ್ಲಿ ಪ್ರಸ್ತಾಪಿಸಲಾಗಿದ್ದ ಪ್ರಮುಖ ಶಿಫಾರಸ್ಸುಗಳಲ್ಲಿ ಸಚಿವಾಲಯದ ಹೆಸರು ಮರುನಾಮಕರಣವೂ ಸೇರಿತ್ತು. ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಕಳೆದ ತಿಂಗಳು ಅನುಮೋದಿಸಿತ್ತು.

ಸೋಮವಾರ ರಾತ್ರಿ ಪ್ರಕಟಿಸಲಾಗಿರುವ ಗೆಜೆಟೆಡ್‌ ನೋಟಿಫಿಕೇಷನ್‌ನಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಹೆಸರನ್ನು ಶಿಕ್ಷಣ ಸಚಿವಾಲಯವಾಗಿ ಬದಲಿಸಲು ರಾಷ್ಟ್ರಪತಿ ಒಪ್ಪಿಗೆ ನೀಡಿರುವುದಾಗಿ ತಿಳಿಸಲಾಗಿದೆ. 1985ರಲ್ಲಿ ಅಂದಿನ ಪ್ರಧಾನಿ ರಾಜೀವ್‌ ಗಾಂಧಿ ಅವರ ಆಡಳಿತಾವಧಿಯಲ್ಲಿ 'ಶಿಕ್ಷಣ ಸಚಿವಾಲಯವು' ಮಾನವ ಸಂಪನ್ಮೂಲ ಸಚಿವಾಲಯವಾಗಿ ಬದಲಾಯಿತು. 1986ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಪರಿಚಯಿಸಲಾಯಿತು ಹಾಗೂ 1992ರಲ್ಲಿ ಅದಕ್ಕೆ ತಿದ್ದುಪತಿ ತರಲಾಯಿತು.

ರಾಜೀವ್‌ ಗಾಂಧಿ ಅವರ ಸಚಿವ ಸಂಪುಟದಲ್ಲಿ ಪಿ.ವಿ.ನರಸಿಂಹ ರಾವ್‌ ಅವರು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಮೊದಲ ಸಚಿವರಾಗಿದ್ದರು.

ಇಸ್ರೊ ಮಾಜಿ ಅಧ್ಯಕ್ಷ ಕೆ.ಕಸ್ತೂರಿರಂಗನ್‌ ಅವರ ನೇತೃತ್ವದಲ್ಲಿ ಸಮಿತಿಯು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವ ಕಾರ್ಯ ನಡೆಸಿತು. ಆ ಸಮಿತಿಯು ಸಚಿವಾಲಯದ ಹೆಸರು ಬದಲಿಸಲು ಶಿಫಾರಸ್ಸು ಮಾಡಿತು. ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಅಧ್ಯಕ್ಷರಾದ ರಾಮ್‌ ಬಹದೂರ್‌ ರಾಯ್‌ 2018ರಲ್ಲಿ ಅದೇ ವಿಚಾರವನ್ನು ಮತ್ತೊಮ್ಮೆ ಪ್ರಸ್ತಾಪಿಸಿದ್ದು ಚರ್ಚೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT