ಹೈದರಾಬಾದ್: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಇಬ್ಬರು ಯುವಕರು ಅತ್ಯಾಚಾರವೆಸಗಿದ ಘಟನೆ ಹೈದರಾಬಾದ್‌ನ ಹಳೆ ನಗರದಲ್ಲಿ ನಡೆದಿದೆ.

13 ವರ್ಷದ ಸಂತ್ರಸ್ತೆಯ ಮೇಲೆ ಹೋಟೆಲ್‌ವೊಂದರಲ್ಲಿ ಎರಡು ದಿನಗಳ ಕಾಲ ಇಬ್ಬರು ಆರೋಪಿಗಳು ಅತ್ಯಾಚಾರವೆಸಗಿದ್ದಾರೆ.

ಬಾಲಕಿಯನ್ನು ಅಪಹರಿಸಿದ ನಂತರ ಮಾದಕ ದ್ರವ್ಯ ನೀಡಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ.

ಮಂಗಳವಾರ ಚಂಚಲಗುಡದಲ್ಲಿ ಔಷಧಿ ಖರೀದಿಸಲು ಹೊರಗೆ ಹೋಗಿದ್ದ ಬಾಲಕಿಯನ್ನು ಯುವಕರು ಅಪಹರಿಸಿದ್ದರು. ಆಕೆ ಮನೆಗೆ ಹಿಂತಿರುಗದ ಕಾರಣ ಆಕೆಯ ತಾಯಿ ದಬೀರಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಅಪರಿಚಿತ ಯುವಕರು ಬಾಲಕಿಯನ್ನು ಅಪಹರಿಸಿ, ಕಾರಿನಲ್ಲಿ ಕರೆದುಕೊಂಡು ಹೋಟೆಲ್‌ಗೆ ತೆರಳಿದ್ದರು. ನಂತರ ಆಕೆಗೆ ಮಾದಕ ವಸ್ತು ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದರು.

ಈ ಘಟನೆಯ ನಂತರ ಆರೋಪಿಗಳು ಸಂತ್ರಸ್ತೆಯ ತಾಯಿಗೆ ಬುಧವಾರ ಕರೆ ಮಾಡಿ ಆಕೆ ತಮ್ಮೊಂದಿಗಿದ್ದಾಳೆ ಎಂದು ತಿಳಿಸಿದ್ದರು. ಬಳಿಕ ಆಕೆಯನ್ನು ಚಾದರ್‌ಘಾಟ್ ಬಳಿ ಡ್ರಾಪ್ ಮಾಡಿದ್ದರು.

ಸಂತ್ರಸ್ತೆಯ ತಾಯಿ ಪೊಲೀಸರೊಂದಿಗೆ ಆರೋಪಿಗಳ ದೂರವಾಣಿ ಸಂಖ್ಯೆಯನ್ನು ಹಂಚಿಕೊಂಡಿದ್ದರು. ನಂತರ ಪೊಲೀಸರು ಆರೋಪಿಗಳನ್ನು ರೈನ್ ಬಜಾರ್ ಪ್ರದೇಶದಲ್ಲಿ ಬಂಧಿಸಿದ್ದಾರೆ.

ಆರೋಪಿಗಳಿಬ್ಬರನ್ನೂ ಬಂಧಿಸಲಾಗಿದ್ದು, ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ (ಪೋಕ್ಸೊ) ಕಾಯ್ದೆಯಡಿ ದಬೀರ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.