ಮಂಗಳವಾರ, ಡಿಸೆಂಬರ್ 1, 2020
24 °C

ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ ಐಎಎಸ್‌ ಜೋಡಿ ಟಿನಾ ಡಾಬಿ–ಅಥರ್ ಖಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೈಪುರ: 2015ನೇ ಸಾಲಿನ ಐಎಎಸ್‌ ಪರೀಕ್ಷೆಯಲ್ಲಿ ಮೊದಲ ರ್‍ಯಾಂಕ್ ಪಡೆದಿದ್ದ ಟಿನಾ ಡಾಬಿ ಹಾಗೂ ಅವರ ಪತಿ ಅಥರ್‌ ಖಾನ್‌ ವಿಚ್ಛೇದನ ಪಡೆದುಕೊಳ್ಳಲು ನಿರ್ಧರಿಸಿದ್ದಾರೆ.

2018ರಲ್ಲಿ ಮದುವೆಯಾಗಿದ್ದ ಈ ದಂಪತಿ ಪರಸ್ಪರ ಒಪ್ಪಿಗೆಯ ಮೇರೆಗೆ ಇದೀಗ ಜೈಪುರ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದೆ. ಕಾಶ್ಮೀರ ಮೂಲದವರಾದ ಅಥರ್‌ ಖಾನ್‌ 2015ನೇ ಸಾಲಿನ ಐಎಎಸ್‌ ಪರೀಕ್ಷೆಯಲ್ಲಿ ಟೀನಾ ನಂತರದ ಸ್ಥಾನ (ಎರಡನೇ ರ್‍ಯಾಂಕ್ ) ಪಡೆದುಕೊಂಡಿದ್ದರು.

ಟೀನಾ ಮತ್ತು ಅಥರ್‌ ತರಬೇತಿ ಸಂದರ್ಭದಲ್ಲಿ ಪರಸ್ಪರ ಪ್ರೀತಿಸಲಾರಂಭಿಸಿದ್ದರು ಎನ್ನಲಾಗಿದ್ದು, ಸದ್ಯ ರಾಜಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: ​ಐಎಎಸ್‌ ಟಾಪರ್ಸ್ ಅಂತರ ಧರ್ಮೀಯ ವಿವಾಹ: ಜಾಲತಾಣಗಳಲ್ಲಿ ಹರಿದಾಡುತ್ತಿವೆ ಕೆಟ್ಟ ಸಂದೇಶಗಳು

ಟೀನಾ ಮತ್ತು ಅಥರ್‌ ಅಂತರ್‌ಧರ್ಮೀಯರಾದ ಕಾರಣ ಹಲವು ರಾಜಕೀಯ ನಾಯಕರು ಮತ್ತು ಖ್ಯಾತನಾಮರು ಈ ಜೋಡಿಯನ್ನು ಅಭಿನಂದಿಸಿದ್ದರು. ಆದರೆ, ಹಿಂದೂ ಮಹಾಸಭಾ ಇದು ‘ಲವ್‌ ಜಿಹಾದ್‌’ ಎಂದು ಟೀಕಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿಯೂ ಪರ ವಿರೋಧದ ಚರ್ಚೆ ನಡೆದಿದ್ದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು