ಭಾನುವಾರ, ಅಕ್ಟೋಬರ್ 17, 2021
23 °C

ಮಗನ ವಿಚಾರದಲ್ಲಿ ಶಾರುಖ್‌ ಮೇಲೆ ದಾಳಿ ನಡೆಸುವವರನ್ನು ಕಂಡು ಅಸಹ್ಯವಾಗಿದೆ: ತರೂರ್

ಪ್ರಜಾವಾಣಿ ವೆಬ್‌‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ದೆಹಲಿ: ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಬಂಧನಕ್ಕೆ ಒಳಗಾಗುತ್ತಲೇ ಬಾಲಿವುಡ್ ನಟ ಶಾರುಖ್ ಖಾನ್ ಅವರ ಮೇಲೆ ಕೆಲವರು ದಾಳಿ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, 'ನಾನು ಡ್ರಗ್ಸ್‌ ಪ್ರಿಯನಲ್ಲ. ಎಂದಿಗೂ ಅದನ್ನು ಬಳಸಿಲ್ಲ. ಆದರೆ, ಡ್ರಗ್ಸ್‌ ಪ್ರಕರಣದಲ್ಲಿ ಆರ್ಯನ್‌ ಖಾನ್‌ ಬಂಧನವಾದ ವಿಚಾರವನ್ನು ಇಟ್ಟುಕೊಂಡು ಶಾರುಖ್‌ ಖಾನ್‌ ಅವರ ಮೇಲೆ ಮುಗಿಬೀಳುತ್ತಿರುವವರನ್ನು ಕಂಡು ಅಸಹ್ಯವಾಗಿದೆ. ಅವರ ವಿಚಾರದಲ್ಲಿ ಸ್ವಲ್ಪ ಸಹಾನುಭೂತಿ ಇರಬೇಕು. ಸಾರ್ವಜನಿಕ ತುಚ್ಚೀಕರಣ ಸರಿಯಲ್ಲ. 23 ವರ್ಷದ ಹುಡುಗನ ಮೇಲೆ ಇಷ್ಟು ಸಂತೋಷದಿಂದ ದಾಳಿ ಮಾಡುವುದು ಬೇಕಿಲ್ಲ,‘ ಎಂದುಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮುಂಬೈಯ ತೀರ ಪ್ರದೇಶದ ಐಷಾರಾಮಿ ‘ಕ್ರೂಸ್’ ಹಡಗಿನಲ್ಲಿ ನಡೆದಿತ್ತು ಎನ್ನಲಾದ ಡ್ರಗ್ಸ್‌ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿ ಆರ್ಯನ್ ಖಾನ್‌ ಹಾಗೂ ಇನ್ನೂ ಏಳು ಮಂದಿಯನ್ನು ಎನ್‌ಸಿಬಿ ಅಧಿಕಾರಿಗಳು ಭಾನುವಾರ ಬಂಧಿಸಲಾಗಿದೆ. ಅವರನ್ನು ಅ.7 ರವರೆಗೆ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕದ (ಎನ್‌ಸಿಬಿ) ವಶಕ್ಕೆ ಒಪ್ಪಿಸಿ ಮುಂಬೈ ನ್ಯಾಯಾಲಯ ಆದೇಶಿಸಿದೆ.

ಇನ್ನಷ್ಟು...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು