ಸೋಮವಾರ, ಅಕ್ಟೋಬರ್ 18, 2021
23 °C

ಎನ್‌ಸಿಬಿ ಡ್ರಗ್ಸ್ ಬಲೆಗೆ ಬಿದ್ದ ಶಾರುಖ್ ಖಾನ್ ಪುತ್ರ ಆರ್ಯನ್ ಹಿನ್ನೆಲೆ ಏನು?

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಮುಂಬೈ: ಡ್ರಗ್ಸ್‌ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ರನ್ನು ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕದ (ಎನ್‌ಸಿಬಿ) ಅಧಿಕಾರಿಗಳು ಅಧಿಕೃತವಾಗಿ ಬಂಧಿಸಿದ್ದಾರೆ.

23 ವರ್ಷದ ಆರ್ಯನ್ ಖಾನ್ ತಂದೆಯ ಜೊತೆ ಸಿನಿ ಜಗತ್ತಿನಲ್ಲಿ ಕಾಣಿಸಿಕೊಳ್ಳದಿದ್ದರೂ ಅವರು ಸಿನಿಮಾ ನಿರ್ದೇಶನಕ್ಕೆ ಇಳಿಯಲಿದ್ದಾರೆ ಎನ್ನಲಾಗಿತ್ತು. ಆದರೆ, ಶಾರುಖ್ ಖಾನ್ ಆರ್ಯನ್‌ಗೆ ಚಿತ್ರರಂಗ ಇಷ್ಟವಿಲ್ಲ ಎಂದು ಒಂದು ಸಾರಿ ಹೇಳಿದ್ದರು.

ತಮ್ಮ ತಂಗಿ ಸುಹಾನಾ ಖಾನ್‌ರಂತೆ ಸಾಮಾಜಿಕ ಜಾಲತಾಣದಲ್ಲಿ ಕ್ರೀಯಾಶೀಲವಾಗಿರದ ಆರ್ಯನ್, 1997 ರಲ್ಲಿ ಜನಿಸಿದ್ದಾರೆ. ಯುನಿವರ್ಸಿಟಿ ಆಫ್ ಸೌಥ್ ಕ್ಯಾಲಿಪೋರ್ನಿಯಾದಿಂದ ಪದವಿ ಪಡೆದು, ಲಂಡನ್‌ನಲ್ಲಿ ಸಿನಿಮಾ ನಿರ್ದೇಶನದ ಬಗ್ಗೆ ವ್ಯಾಸಂಗ ಮಾಡಿದ್ದಾರೆ. 

ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಆರ್ಯನ್ ಇದುವರೆಗೆ ಯಾವುದೇ ಬಾಲಿವುಡ್ ಅಥವಾ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸಿಲ್ಲ. 2019 ರಲ್ಲಿ ಬಿಡುಗಡೆಯಾಗಿದ್ದ ಡಿಸ್ನಿಯ ‘ದಿ ಲಯನ್ ಕಿಂಗ್’ ಆನಿಮೇಷನ್ ಚಿತ್ರದ ಹಿಂದಿ ಅವತರಣಿಕೆಗೆ ಹಿನ್ನೆಲೆ ಧ್ವನಿ ನೀಡಿದ್ದರು. ಅದನ್ನು ಬಿಟ್ಟರೇ ಶಾರುಖ್ ಅಭಿನಯದ ‘ಕಬಿ ಖುಷಿ ಕಬಿ ಗಮ್’ ಚಿತ್ರದಲ್ಲಿ ಬಾಲನಟನಾಗಿ ಆರ್ಯನ್ ಕಾಣಿಸಿಕೊಂಡಿದ್ದರು.

ಬಂಧನ: ಆರ್ಯನ್ ಜೊತೆ ಇನ್ನೂ ಏಳು ಜನರನ್ನು ಬಂಧಿಸಲಾಗಿದೆ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತರಲ್ಲಿ ಇಬ್ಬರು ಯುವತಿಯರೂ ಇದ್ದು, ಆರ್ಯನ್ ಖಾನ್ ಸೇರಿದಂತೆ ಮುನ್‌ಮುನ್ ದಮೇಚಾ, ನೂಪೂರ್ ಸಾರಿಕಾ, ಇಸ್‌ಮಿತ್ ಸಿಂಗ್, ಮೋಹಕ್ ಜೆಸ್ವಾಲ್, ವಿಕ್ರಾಂತ್ ಚೊಕ್ಕರ್, ಗೋಮಿತ್ ಚೋಪ್ರಾ, ಅರ್ಬಾಜ್ ಮರ್ಚಂಟ್ ಎನ್ನುವವರು ಇದ್ದಾರೆ ಎಂದು ಎನ್‌ಸಿಬಿ ತಿಳಿಸಿದೆ.

ಆರ್ಯನ್ ಖಾನ್ ಹಾಗೂ ಇತರ ಏಳು ಜನರ ಮೇಲೆ ಎನ್‌ಡಿಪಿಎಸ್‌ ಕಾಯ್ದೆ 8ಸಿ, 20ಬಿ, 27 ಮತ್ತು 35 ರ ಅಡಿ ಪ್ರಕರಣ ದಾಖಲಾಗಿದೆ. ಇನ್ನು ತಮ್ಮ ಮಗನ ಬಂಧನ ಸುದ್ದಿ ತಿಳಿದಿರುವ ಶಾರುಖ್‌ ಖಾನ್ ಅವರು ಸ್ಪೇನ್‌ನಲ್ಲಿ ಚಿತ್ರೀಕರಣ ನಿಲ್ಲಿಸಿ ಭಾರತಕ್ಕೆ ಬರುತ್ತಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ಡ್ರಗ್ಸ್: ಆರ್ಯನ್ ಇನ್ನೂ ಮಗು, ಅವನಿಗೆ ಉಸಿರಾಡಿಸಲು ಬಿಡಿ– ನಟ ಸುನೀಲ್ ಶೆಟ್ಟಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು