ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಲ್ ಎಸ್ಟೇಟ್ ಬಿಲ್ಡರ್-ಖರೀದಿದಾರರ ನಡುವೆ ಮಾದರಿ ಒಪ್ಪಂದ ಬೇಕು: ‘ಸುಪ್ರೀಂ’

Last Updated 4 ಅಕ್ಟೋಬರ್ 2021, 12:33 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ದೇಶವು ಗ್ರಾಹಕರ ಹಿತರಕ್ಷಣೆಗಾಗಿ ಬಿಲ್ಡರ್-ಖರೀದಿದಾರರ ನಡುವೆ ಮಾದರಿ ಒಪ್ಪಂದ ಜಾರಿಗೆ ತರುವ ಅಗತ್ಯವಿದೆ’ ಎಂದು ಸುಪ್ರೀಂಕೋರ್ಟ್‌ ಸೋಮವಾರ ಹೇಳಿದೆ.

ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಬಿ.ವಿ. ನಾಗರತ್ನ ಅವರನ್ನೊಳಗೊಂಡ ಪೀಠವು ಈ ಸಂಬಂಧ ಪ್ರತಿಕ್ರಿಯೆ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ನೋಟಿಸ್‌ ನೀಡಿದೆ.

‘ಬಿಲ್ಡರ್‌ಗಳು ಒಪ್ಪಂದದಲ್ಲಿ ಷರತ್ತುಗಳನ್ನು ವಿಧಿಸಲು ಪ್ರಯತ್ನಿಸುತ್ತಿರುತ್ತಾರೆ, ಅದು ಸಾಮಾನ್ಯ ಜನರಿಗೆ ತಿಳಿದಿರುವುದಿಲ್ಲ. ಒಪ್ಪಂದದಲ್ಲಿ ಸ್ವಲ್ಪ ಏಕರೂಪತೆ ಇರಬೇಕು. ಗ್ರಾಹಕರ ರಕ್ಷಣೆಗಾಗಿ ಬಿಲ್ಡರ್– ಖರೀದಿದಾರರ ಮಾದರಿ ಒಪ್ಪಂದವನ್ನು ದೇಶದಲ್ಲಿ ಜಾರಿಗೆ ತರುವುದು ಮುಖ್ಯ’ ಎಂದು ಪೀಠ ಹೇಳಿದೆ.

ಅರ್ಜಿದಾರರಾದ ವಕೀಲ ಅಶ್ವಿನಿ ಉಪಾಧ್ಯಾಯರ ಪರ ಹಾಜರಾದ ಹಿರಿಯ ವಕೀಲ ವಿಕಾಸ್ ಸಿಂಗ್, ಮಾದರಿ ಒಪ್ಪಂದವು ಕೆಲವು ರಾಜ್ಯಗಳಲ್ಲಿ ಇದೆ ಮತ್ತು ಕೆಲವು ರಾಜ್ಯಗಳಲ್ಲಿ ಇಲ್ಲ. ಇದ್ದರೂ ಆ ಒಪ್ಪಂದಗಳಲ್ಲಿ ಯಾವುದೇ ಏಕರೂಪತೆ ಇಲ್ಲ. ಹಾಗಾಗಿಕೇಂದ್ರ ಸರ್ಕಾರವೇ ಸಿದ್ಧಪಡಿಸಿದ ಮಾದರಿ ಒಪ್ಪಂದದ ಅಗತ್ಯವಿದೆ ಎಂದು ವಾದಿಸಿದರು.

ರಿಯಲ್ ಎಸ್ಟೇಟ್ ರೆಗ್ಯುಲೇಟರಿ ಅಥಾರಿಟಿ (ರೆರಾ) ಕಾಯ್ದೆ 2016 ರ ಪ್ರಕಾರ ಗ್ರಾಹಕರನ್ನು ರಕ್ಷಿಸಲು ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಪಾರದರ್ಶಕತೆ ತರಲು ಬಿಲ್ಡರ್‌ಗಳು ಮತ್ತು ಏಜೆಂಟ್, ಖರೀದಿದಾರರಿಗೆ ಮಾದರಿ ಒಪ್ಪಂದಗಳನ್ನು ರೂಪಿಸಲು ಕೇಂದ್ರ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಉಪಾಧ್ಯಾಯ ಪಿಐಎಲ್ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT