ನವದೆಹಲಿ: ಯುಎಇಯಲ್ಲಿ ಮಾರ್ಚ್ 3ರಿಂದ ಆರಂಭವಾಗಲಿರುವ ವಿವಿಧ ದೇಶಗಳ ವಾಯುಪಡೆಗಳ ಸಮರಾಭ್ಯಾಸದಲ್ಲಿ ಇದೇ ಮೊದಲ ಬಾರಿಗೆ ಭಾರತದ ವಾಯುಪಡೆಯೂ ಪಾಲ್ಗೊಳ್ಳುತ್ತಿದೆ.

‘ಎಕ್ಸಸೈಜ್ ಡಸರ್ಟ್ ಫ್ಲ್ಯಾಗ್–4’ ಎಂದು ಕರೆಯಲಾಗುವ ಈ ಸಮರಾಭ್ಯಾಸ ಅಲ್–ದಫ್ರಾ ವಾಯುನೆಲೆಯಲ್ಲಿ ಮಾರ್ಚ್ 21ರ ವರೆಗೆ ನಡೆಯುವುದು.

ಯುಎಇ, ಅಮೆರಿಕ, ಫ್ರಾನ್ಸ್, ಸೌದಿ ಅರೇಬಿಯಾ, ದಕ್ಷಿಣ ಕೊರಿಯಾ, ಬಹರೇನ್‌ನ ವಾಯುಪಡೆಗಳು ಈ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲಿವೆ ಎಂದು ಐಎಎಫ್ ಮೂಲಗಳು ಮಂಗಳವಾರ ಹೇಳಿವೆ.

‘ವಾಯುಪಡೆಯ ಆರು ಎಸ್‌ಯು–30 ಎಂಕೆಐ, ಎರಡು ಸಿ–17 ಹಾಗೂ ಒಂದು ಐಎಲ್–78 ಟ್ಯಾಂಕರ್ ಯುದ್ಧವಿಮಾನ ಪಾಲ್ಗೊಳ್ಳುವವು. ಯುದ್ಧವಿಮಾನಗಳನ್ನು ಯುಎಇಗೆ ಒಯ್ಯಲು, ಮರಳಿ ತರುವ ಕಾರ್ಯಕ್ಕೆ ಸಿ–17 ಗ್ಲೋಬ್‌ಮಾಸ್ಟರ್‌ಅನ್ನು ಬಳಸಿಕೊಳ್ಳಲಾಗುವುದು’ ಎಂದೂ ವಾಯುಪಡೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.