ಮಂಗಳವಾರ, ಮಾರ್ಚ್ 28, 2023
30 °C

ಪೆಟ್ರೊಲ್, ಡೀಸೆಲ್‌ನಂತೇ ಕಬ್ಬಿನ ದರವನ್ನೂ ಏರಿಸಿ: ಪ್ರಿಯಾಂಕಾ ಗಾಂಧಿ ಒತ್ತಾಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಅಡುಗೆ ಅನಿಲ, ಪೆಟ್ರೊಲ್ ಮತ್ತು ಡೀಸೆಲ್‌ ಬೆಲೆ ಏರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರ, ರೈತರಿಂದ ಖರೀದಿಸುವ ಕಬ್ಬಿನ ಬೆಲೆಯನ್ನು ಏರಿಸಬೇಕು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಒತ್ತಾಯಿಸಿದ್ದಾರೆ. 

ಕೇಂದ್ರ ಸರ್ಕಾರ ಪ್ರತಿ ತಿಂಗಳು ಎಲ್‌ಪಿಜಿ ದರವನ್ನು ಹೆಚ್ಚಿಸುತ್ತಿದೆ. ಕಳೆದ ಮೂರ್ನಾಲ್ಕು ತಿಂಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ತಿಂಗಳಲ್ಲಿ 60 ರಿಂದ 70 ಸಲ ಹೆಚ್ಚಿಸಿದೆ. ಆದರೆ, ಮೂರು ವರ್ಷಗಳಿಂದ ರೈತರಿಂದ ಖರೀದಿಸುವ ಕಬ್ಬಿನ ಬೆಲೆಯನ್ನು ಮಾತ್ರ ಏರಿಸಿಲ್ಲ ಏಕೆ ? ಎಂದು ಪ್ರಿಯಾಂಕಾ ಗಾಂಧಿ ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ.

‘ಮೆಹಂಗೆ ದಿನ್‌ (ದುಬಾರಿ ದಿನಗಳು)‘ ಮತ್ತು ‘ಗನ್ನೆ ಕೆ ದಾಮ್‌ ಬಧಾವೊ (ಕಬ್ಬಿನ ಬೆಲೆಯನ್ನೂ ಹೆಚ್ಚಿಸಿ) ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಈ ಟ್ವೀಟ್‌ ಅನ್ನು ಪೋಸ್ಟ್‌ ಮಾಡಿದ್ದಾರೆ.

ಪ್ರಿಯಾಂಕಾ ಗಾಂಧಿ ಕಳೆದ ವಾರವೂ ಇದೇ ವಿಚಾರವನ್ನು ಪ್ರಸ್ತಾಪಿಸಿದ್ದರು. ಡೀಸೆಲ್ ಮತ್ತು ವಿದ್ಯುತ್ ದರ ನಿಯಮಿತವಾಗಿ ಏರಿಕೆಯಾಗುತ್ತಿದ್ದರೂ, ಕಳೆದ ಮೂರು ವರ್ಷಗಳಿಂದ ಕಬ್ಬಿನ ದರ ಏಕೆ ಏರಿಸಿಲ್ಲ ಎಂದು ಪ್ರಶ್ನಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು