ಗುರುವಾರ , ಫೆಬ್ರವರಿ 25, 2021
19 °C

ಆರು ರಾಷ್ಟ್ರಗಳಿಗೆ ಕೋವಿಡ್‌–19 ಲಸಿಕೆ ಸರಬರಾಜು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭೂತಾನ್‌, ಮಾಲ್ಡೀವ್ಸ್‌, ಬಾಂಗ್ಲಾದೇಶ, ನೇಪಾಳ, ಮ್ಯಾನ್ಮಾರ್‌, ಸಿಯಾಚಿಲ್‌ಗೆ ಕೋವಿಡ್‌–19 ಲಸಿಕೆಯನ್ನು ಬುಧವಾರದಿಂದ ಸರಬರಾಜು ಮಾಡುವುದಾಗಿ ಭಾರತವು ಮಂಗಳವಾರ ಘೋಷಿಸಿದೆ.

ದೇಶದಲ್ಲಿ ಅಗತ್ಯತೆ ಇರುವ ಲಸಿಕೆಯ ಪ್ರಮಾಣವನ್ನು ಗಮನದಲ್ಲಿ ಇರಿಸಿಕೊಂಡು, ಮುಂದಿನ ವಾರ ಹಾಗೂ ತಿಂಗಳಲ್ಲಿ ಹಂತ ಹಂತವಾಗಿ ಪಾಲುದಾರ ರಾಷ್ಟ್ರಗಳಿಗೆ ಭಾರತವು ಲಸಿಕೆಯನ್ನು ಸರಬರಾಜು ಮಾಡಲಿದೆ ಎಂದು ವಿದೇಶಾಂಗ ಸಚಿವಾಲಯವು ತಿಳಿಸಿದೆ. ಶ್ರೀಲಂಕಾ, ಅಫ್ಗಾನಿಸ್ತಾನ ಹಾಗೂ ಮಾರಿಷಸ್‌ನ ನಿಯಂತ್ರಕರಿಂದ ಅಗತ್ಯವಿರುವ ಒಪ್ಪಿಗೆಗಳಿಗೆ ಭಾರತವು ಕಾಯುತ್ತಿದೆ ಎಂದೂ ಸಚಿವಾಲಯವು ತಿಳಿಸಿದೆ.

‘ಭಾರತದಲ್ಲಿ ತಯಾರಾದ ಕೋವಿಡ್‌–19 ಲಸಿಕೆಗಳಿಗೆ ವಿವಿಧ ನೆರೆ ರಾಷ್ಟ್ರಗಳಿಂದ ಹಾಗೂ ಪಾಲುದಾರ ರಾಷ್ಟ್ರಗಳಿಂದ ಮನವಿಯನ್ನು ಭಾರತವು ಸ್ವೀಕರಿಸಿದೆ. ಈ ಮನವಿಗೆ ಪ್ರತಿಯಾಗಿ ಭಾರತವು ಲಸಿಕೆ ಸರಬರಾಜು ಮಾಡುತ್ತಿದೆ’ ಎಂದು ಪ್ರಕಟಣೆಯಲ್ಲಿ ಸಚಿವಾಲಯವು ತಿಳಿಸಿದೆ.

ಭಾರತದಲ್ಲಿ ಉತ್ಪಾದಿಸುವ ಲಸಿಕೆ ಪೂರೈಸುವಂತೆ ನೆರೆ ರಾಷ್ಟ್ರಗಳು ಮತ್ತು ಪಾಲುದಾರ ದೇಶಗಳಿಂದ ಹಲವು ಮನವಿಗಳು ಸಲ್ಲಿಕೆಯಾಗಿವೆ. ಈ ಮನವಿಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಮಾನವೀಯ ನೆಲೆಯಲ್ಲಿ ನಮ್ಮ ಉತ್ಪಾದನಾ ಸಾಮರ್ಥ್ಯವನ್ನು ಬಳಸಿಕೊಂಡು ಲಸಿಕೆ ಪೂರೈಕೆಗೆ ಭಾರತ ಬದ್ಧವಾಗಿದೆ. ನೆರವಿನ ರೂಪದಲ್ಲಿ ಭೂತಾನ್, ಮಾಲ್ಡೀವ್ಸ್‌, ಬಾಂಗ್ಲಾದೇಶ, ನೇಪಾಳ, ಮ್ಯಾನ್ಮಾರ್‌ ಹಾಗೂ ಸಿಯಾಚಿಲ್‌ಗೆ ಬುಧವಾರದಿಂದ ರಫ್ತು ಆರಂಭಿಸಲಾಗುವುದು ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ದೇಶದಲ್ಲಿ ಈಗಾಗಲೇ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆ ನೀಡಿಕೆ ಆರಂಭಿಸಲಾಗಿದೆ. ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಸದ್ಯ ಲಸಿಕೆ ನೀಡಲಾಗುತ್ತಿದೆ.

ಆಕ್ಸ್‌ಫರ್ಡ್‌–ಆಸ್ಟ್ರಜೆನೆಕಾದ ಕೋವಿಶೀಲ್ಡ್ ಲಸಿಕೆಯನ್ನು ಸೀರಂ ಇನ್‌ಸ್ಟಿಟ್ಯೂಟ್‌ ಹಾಗೂ ಕೊವ್ಯಾಕ್ಸಿನ್‌ ಅನ್ನು ಭಾರತ್ ಬಯೋಟೆಕ್ ಕಂಪನಿಗಳು ಉತ್ಪಾದಿಸುತ್ತಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು