ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಲಕ್ಷಕ್ಕೂ ಅಧಿಕ ಕೋವಿಡ್‌ ಸಂಬಂಧಿತ ಸಾವುಗಳನ್ನು ಹೊಂದಿದ ಮೂರನೇ ದೇಶ ಭಾರತ

ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ ಭಾನುವಾರ ಸಂಜೆಯ ವೇಳೆಗೆ ಮೂರು ಲಕ್ಷ ದಾಟಿದೆ.ಆ ಮೂಲಕ ಮೂರು ಲಕ್ಷಕ್ಕೂ ಅಧಿಕ ಕೋವಿಡ್‌ ಸಂಬಂಧಿತ ಸಾವುಗಳನ್ನು ಹೊಂದಿದ ಮೂರನೇ ರಾಷ್ಟ್ರ ಭಾರತವಾಗಿದೆ.

ಅಮೆರಿಕ ಮತ್ತು ಬ್ರೆಜಿಲ್‌ ದೇಶಗಳಲ್ಲಿ ಭಾರತಕ್ಕಿಂತ ಅಧಿಕ ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ಕೋವಿಡ್‌ ವರ್ಲ್ಡೊಮೀಟರ್ ವೆಬ್‌ಸೈಟ್‌ ಪ್ರಕಾರ, ಇದುವರೆಗೆ ಅಮೆರಿಕದಲ್ಲಿ 6,03,896 ಮತ್ತು ಬ್ರೆಜಿಲ್‌ನಲ್ಲಿ 4,48,291 ಜನರು ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ, ಭಾರತದಲ್ಲಿ ಭಾನುವಾರ ಸಂಜೆಯ ವೇಳೆಗೆ 3,03,007 ಸೋಂಕಿತರು ಸಾವಿಗೀಡಾಗಿದ್ದಾರೆ.

ಈ ವರೆಗೆ ಜಗತ್ತಿನಾದ್ಯಂತ 1,67,347,273 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 34,74,704 ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ. 1,48,363,057 ಮಂದಿ ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ ಎಂದು ವರ್ಲ್ಡೊಮೀಟರ್ ವೆಬ್‌ಸೈಟ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT