ಗುರುವಾರ , ಅಕ್ಟೋಬರ್ 22, 2020
22 °C

Covid-19 India Update: ದೇಶದಲ್ಲಿ 55,342 ಹೊಸ ಪ್ರಕರಣಗಳು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಕೋಲ್ಕತ್ತಾದಲ್ಲಿ ದುರ್ಗಾ ಪೂಜೆಗೆ ಸಿದ್ಧತೆ ನಡೆದಿದ್ದು, ಪಿಪಿಇ ಕಿಟ್‌ ಧರಿಸಿರುವ ಸಿಬ್ಬಂದಿ ಸ್ಥಳವನ್ನು ಸೋಂಕು ಮುಕ್ತಗೊಳಿಸುವ ಕಾರ್ಯ ನಡೆಸಿದರು

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್‌–19 ದೃಢಪಟ್ಟ 55,342 ಹೊಸ ಪ್ರಕರಣಗಳು ದಾಖಲಾಗಿವೆ. ನಿತ್ಯದ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿರುವುದು ಕಂಡು ಬಂದಿದ್ದು, ಸೋಂಕಿನಿಂದ ಗುಣಮುಖರಾದವರ ಪ್ರಮಾಣ ಶೇ 86ಕ್ಕಿಂತಲೂ ಹೆಚ್ಚಿರುವುದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಕಿ–ಅಂಶಗಳಿಂದ ತಿಳಿದು ಬಂದಿದೆ.

ಒಟ್ಟು 71,75,881 ಪ್ರಕರಣಗಳ ಪೈಕಿ 62,27,296 ಸೋಂಕಿನಿಂದ ಗುಣಮುಖರಾಗಿದ್ದಾರೆ. ಈವರೆಗೂ 1,09,856 ಮಂದಿ ಸಾವಿಗೀಡಾಗಿದ್ದು, ಕಳೆದ 24 ಗಂಟೆಗಳಲ್ಲಿ 706 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.

ಪ್ರಸ್ತುತ ದೇಶದಲ್ಲಿ 8,38,729 ಸಕ್ರಿಯ ಪ್ರಕರಣಗಳಿವೆ.

ದೇಶದಲ್ಲಿ ಸೆಪ್ಟೆಂಬರ್‌ 16ಕ್ಕೆ 50 ಲಕ್ಷ ಕೋವಿಡ್‌ ಪ್ರಕರಣಗಳು ದಾಖಲಾದರೆ, ಸೆಪ್ಟೆಂಬರ್‌ 28ಕ್ಕೆ 60 ಲಕ್ಷ ಹಾಗೂ ಅಕ್ಟೋಬರ್ 11ರಂದು ಪ್ರಕರಣಗಳ ಸಂಖ್ಯೆ 70 ಲಕ್ಷ ದಾಟಿತು.

ಐಸಿಎಂಆರ್‌ ಪ್ರಕಾರ, ಅಕ್ಟೋಬರ್‌ 12ರ ವರೆಗೂ ದೇಶದಲ್ಲಿ  8,89,45,107 ಗಂಟಲು ದ್ರವ ಮಾದರಿಗಳಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ಸೋಮವಾರ 10,73,014 ಮಾದರಿಗಳ ಪರೀಕ್ಷೆ ನಡೆದಿರುವುದಾಗಿ ಹೇಳಿದೆ.

ದೇಶದಲ್ಲಿ ವರದಿಯಾಗಿರುವ 1,09,856 ಮಂದಿ ಸೋಂಕಿತರ ಸಾವುಗಳ ಪೈಕಿ, ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 40,514 ಮಂದಿ ಮೃತಪಟ್ಟಿದ್ದಾರೆ. ತಮಿಳುನಾಡಿನಲ್ಲಿ10,314 ಜನ, ಕರ್ನಾಟಕದಲ್ಲಿ 10,036 ಜನ, ಉತ್ತರ ಪ್ರದೇಶದಲ್ಲಿ 6,438 ಮಂದಿ, ಆಂಧ್ರ ಪ್ರದೇಶದಲ್ಲಿ 6,256 ಮಂದಿ, ದೆಹಲಿಯಲ್ಲಿ 5,809 ಮಂದಿ,  ಪಶ್ಚಿಮ ಬಂಗಾಳದಲ್ಲಿ 5,682 ಜನರು ಮೃತಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು