ಬುಧವಾರ, ಮಾರ್ಚ್ 29, 2023
27 °C

ವರದ್ಕರ್ ಐರ್ಲೆಂಡ್ ಪ್ರಧಾನಿ: ಭಾರತವು ಮಾನವ ಸಂಪನ್ಮೂಲದ ಕಣಜ ಎಂದ ಆನಂದ್ ಮಹೀಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತ ಮೂಲದ ಲಿಯೋ ವರದ್ಕರ್ ಅವರು ಎರಡನೇ ಬಾರಿಗೆ ಐರ್ಲೆಂಡ್‌ನ ಪ್ರಧಾನಿಯಾಗುತ್ತಿರುವ  ಹಿನ್ನೆಲೆಯಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಉದ್ಯಮಿ ಆನಂದ್‌ ಮಹೀಂದ್ರ, ಭಾರತವು ‘ಮಾನವ ಸಂಪನ್ಮೂಲದ ಕಣಜ’ ಎಂದಿದ್ದಾರೆ. 

ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಪ್ರಕಟಿಸಿರುವ ಅವರು, ‘ಬ್ರಿಟನ್‌ ಮತ್ತು ಐರ್ಲೆಂಡ್ ಎರಡೂ ಭಾರತ ಮೂಲದ ಪ್ರಧಾನಿಯನ್ನು ಹೊಂದಿವೆ. ಅಮೆರಿಕದ ಉಪಾಧ್ಯಕ್ಷೆಯೂ ಭಾರತ ಮೂಲದವರು. ಇದೊಂದು ಅಸಾಧಾರಣ ಸಂಗತಿ’ ಎಂದು ಆನಂದ್‌ ಮಹೀಂದ್ರ ಬಣ್ಣಿಸಿದ್ದಾರೆ. 

‘ನಾವು (ಭಾರತ) ಖಂಡಿತವಾಗಿಯೂ ವಿಶ್ವದ ಮಾನವ ಸಂಪನ್ಮೂಲದ ಕಣಜ (ಇನ್ಕ್ಯೂಬೇಟರ್‌)’ ಎಂದು ಅವರು ಹೇಳಿದ್ದಾರೆ. 

ಭಾರತ ಮೂಲದ ಲಿಯೋ ವರದ್ಕರ್ ಅವರು ಎರಡನೇ ಬಾರಿಗೆ ಐರ್ಲೆಂಡ್‌ ಪ್ರಧಾನಿಯಾಗಲಿದ್ದಾರೆ. ಲಿಯೋ ವರದ್ಕರ್‌ ಮಹಾರಾಷ್ಟ್ರದ ವರದ್ ಗ್ರಾಮದ ವೈದ್ಯ ಅಶೋಕ್ ವರದ್ಕರ್ ಅವರ ಪುತ್ರ. 1960ರ ದಶಕದಲ್ಲಿ ಅಶೋಕ್‌ ವರದ್ಕರ್‌ ಪಾಶ್ಚಾತ್ಯ ಬ್ರಿಟನ್‌ಗೆ ವಲಸೆ ಹೋಗಿದ್ದರು. ವರದ್ಕರ್‌ ತಾಯಿ ಐರಿಷ್‌ ಆಗಿದ್ದಾರೆ.  ಲಿಯೋ ವರದ್ಕರ್ ಅವರು ಈ ಹಿಂದೆ 2017 ರಿಂದ 2020 ರವರೆಗೆ ಐರ್ಲೆಂಡ್‌ನ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

ಇದಕ್ಕೂ ಹಿಂದೆ ಭಾರತ ಮೂಲದವರಾದ ರಿಷಿ ಸುನಕ್‌ ಅವರು ಬ್ರಿಟನ್‌ನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಇನ್ಫೊಸಿಸ್‌ನ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿ. 

ವಿಶ್ವದ ಹಲವು ದೇಶಗಳಲ್ಲಿ ಭಾರತ ಮೂಲದ ಹಲವು ಜನಪ್ರತಿನಿಧಿಗಳಿದ್ದು, ಪ್ರಧಾನ ಹುದ್ದೆಗಳನ್ನು ಅಲಂಕರಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು