ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಲಸಿಕೆ ರಫ್ತು ನಿಷೇಧಿಸಿಲ್ಲ: ವಿದೇಶಾಂಗ ಸಚಿವಾಲಯ

Last Updated 2 ಏಪ್ರಿಲ್ 2021, 15:14 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್ ಲಸಿಕೆ ರಫ್ತಿನ ಮೇಲೆ ಭಾರತವು ನಿಷೇಧ ಹೇರಿಲ್ಲ. ಬದಲಿಗೆ ಲಸಿಕೆಗಳನ್ನು ವಿದೇಶಗಳಿಗೆ ಕಳುಹಿಸಿ ಕೊಡುವ ವಿಚಾರದಲ್ಲಿ ಮುಂಚೂಣಿಯಲ್ಲಿದೆ ಎಂದು ವಿದೇಶಾಂಗ ಸಚಿವಾಲಯ ಶುಕ್ರವಾರ ಹೇಳಿದೆ.

ಭಾರತವು ಈವರೆಗೆ 80ಕ್ಕಿಂತಲೂ ಹೆಚ್ಚು ದೇಶಗಳಿಗೆ 640 ಲಕ್ಷಕ್ಕಿಂತಲೂ ಹೆಚ್ಚು ಡೋಸ್ ಲಸಿಕೆಗಳ ಪೂರೈಕೆ ಮಾಡಿದೆ. ಭಾರತದ ‘ಲಸಿಕೆ ಮೈತ್ರಿ’ಯು ಲಸಿಕೆಗಳ ಪೂರೈಕೆ ವಿಚಾರದಲ್ಲಿ ಯಶಸ್ವಿಯಾಗಿದ್ದು ಮಿತ್ರರಾಷ್ಟ್ರಗಳ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಂ ಬಗ್ಚಿ ಹೇಳಿದ್ದಾರೆ.

ಈವರೆಗೆ ಒಟ್ಟು 644 ಲಕ್ಷ ಡೋಸ್ ಲಸಿಕೆಗಳನ್ನು ವಿದೇಶಗಳಿಗೆ ಕಳುಹಿಸಿಕೊಡಲಾಗಿದೆ. ಈ ಪೈಕಿ 104 ಲಕ್ಷ ಡೋಸ್ ಉಚಿತವಾಗಿ, 357 ಲಕ್ಷ ಡೋಸ್ ವಾಣಿಜ್ಯ ಉದ್ದೇಶದಿಂದ ಮತ್ತು 182 ಲಕ್ಷ ಡೋಸ್ ‘ಕೊವ್ಯಾಕ್ಸ್’ ಒಪ್ಪಂದದಡಿ ಪೂರೈಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಭಾರತದಲ್ಲಿ ಉತ್ಪಾದಿಸುತ್ತಿರುವ ಲಸಿಕೆಗೆ ಅನೇಕ ದೇಶಗಳಿಂದ ಬೇಡಿಕೆಯಿದೆ. ಆಯಾ ದೇಶಗಳು ಅವುಗಳ ಅಗತ್ಯಕ್ಕೆ ತಕ್ಕಂತೆ ಲಸಿಕೆ ಪೂರೈಕೆಗೆ ಮನವಿ ಸಲ್ಲಿಸುತ್ತಿವೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT