ಸೋಮವಾರ, ಅಕ್ಟೋಬರ್ 26, 2020
29 °C

ಕೋವಿಡ್‌ಗೆ ಲಸಿಕೆ ಸಿಕ್ಕರೆ ಸಾಕೆ? ಉತ್ಪಾದಿಸಲು ಭಾರತಕ್ಕಿರುವ ಸವಾಲುಗಳೇನು?

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಇಡೀ ಜಗತ್ತನ್ನು ಕಾಡುತ್ತಿರುವ ಕೋವಿಡ್‌ ಸಾಂಕ್ರಾಮಿಕ ರೋಗವನ್ನು ಮಣಿಸಬಲ್ಲ ಲಸಿಕೆಯೊಂದಕ್ಕಾಗಿ ಎಲ್ಲರೂ ಎದುರುನೋಡುತ್ತಿದ್ದಾರೆ. ಲಸಿಕೆ ಸಿಕ್ಕರೂ, ಅತಿ ಹೆಚ್ಚು ಜನಸಂಖ್ಯೆ ಇರುವ ಪ್ರದೇಶಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಅದನ್ನು ಉತ್ಪಾದನೆ ಮಾಡಲು ಮತ್ತು ಉತ್ಪಾದನೆಗೆ ಪೂರಕ ಸೌಲಭ್ಯ ಕಲ್ಪಿಸಲು ಭಾರತ ಕನಿಷ್ಠ ₹3 ರಿಂದ ₹5 ಸಾವಿರ ಕೋಟಿ ಹಣ ಹೂಡಿಕೆ ಮಾಡಬೇಕಾಗಿದೆ.

ಈ ಕುರಿತು ಭಾರತದ ಪ್ರತಿಷ್ಠಿತ ಔಷಧ ತಯಾರಕಾ ಸಂಸ್ಥೆ ‘ಜೈಡಸ್‌ ಕ್ಯಾಡಿಲಾ ಹೆಲ್ತ್‌ ಕೇರ್‌ ಲಿಮಿಟೆಡ್‌’ನ ಅಧ್ಯಕ್ಷ ಪಂಕಜ್‌ ಮಾಹಿತಿ ನೀಡಿದ್ದಾರೆ. ಅಲ್ಲದೆ, ಕೊರೊನಾ ವೈರಸ್‌ಗೆ ಲಸಿಕೆಯೊಂದೇ ಅಂತಿಮ ಪರಿಹಾರವಲ್ಲ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಒಂದು ವರ್ಷದ ಅವಧಿಯಲ್ಲಿ ಭಾರತವು 130 ಕೋಟಿ ಜನರಿಗೆ ಲಸಿಕೆ ಉತ್ಪಾದನೆ ಮತ್ತು ಪೂರೈಕೆ ಮಾಡಬೇಕಾದರೆ, ನನ್ನ ಅಭಿಪ್ರಾಯದ ಪ್ರಕಾರ ಉತ್ಪಾದನೆಗೆ ಪೂರಕವಾದ ಹೆಚ್ಚುವರಿ ವ್ಯವಸ್ಥೆಗಾಗಿ ₹3 ರಿಂದ ₹5 ಸಾವಿರ ಕೋಟಿಯನ್ನು ವ್ಯಯಿಸಬೇಕಾಗುತ್ತದೆ ಎಂದು ಪಟೇಲ್‌ ಹೇಳಿದ್ದಾರೆ.

‘ಈ ಲಸಿಕೆಗಳು ಬಹಳ ಕ್ಲಿಷ್ಟಕರ ಮೂಲಗಳಿಂದ ಬರುತ್ತಿವೆ. ಇದರ ಪರಿಣಾಮವಾಗಿ, ಲಸಿಕೆಯ ಬೆಲೆ ಇತರ ಅನೇಕ ಲಸಿಕೆಗಳಿಗೆ ಹೋಲಿಸಿದರೆ ಗಮನಾರ್ಹವಾಗಿ ಹೆಚ್ಚಾಗಿರಲಿದೆ. ಆದ್ದರಿಂದ ಇದಕ್ಕೆ ಪೂರಕವಾದ ವ್ಯವಸ್ಥೆಗಳು ಆಗಬೇಕಾಗಿವೆ. ಇದಕ್ಕೆ ಹೇಗೆ ಹಣ ಹೊಂದಿಸಲಿದ್ದೇವೆ ಎಂಬುದರ ಕುರಿತು ಯೋಚಿಸುವ ಅವಶ್ಯಕತೆಯಿದೆ,’ ಎಂದು ‘ಲಸಿಕೆಗಾಗಿ ಓಟ: ಔಷಧಕ್ಕಿಂತಲೂ ಮಿಗಿಲು’ ಎಂಬ ಚರ್ಚಾ ಕೂಟದಲ್ಲಿ ಅವರು ಹೇಳಿದರು.

ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವಲ್ಲಿ ಲಸಿಕೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪಟೇಲ್‌ ಒತ್ತಿಹೇಳಿದರಾದರೂ, ಕೋವಿಡ್‌ಗೆ ಲಿಸಿಕೆಯೇ ಅಂತಿಮ ಪರಿಹಾರವಲ್ಲ ಎಂದೂ ಸ್ಪಷ್ಟಪಡಿಸಿದರು. ‘ನನ್ನ ಅಭಿಪ್ರಾಯದಲ್ಲಿ ಲಸಿಕೆ ಮಾತ್ರ ಸಮಸ್ಯೆಗೆ ಪರಿಹಾರವಲ್ಲ. ನಮಗೆ ಲಸಿಕೆ ಬೇಕು. ಆದರೆ, ಕೋವಿಡ್‌ ಚಿಕಿತ್ಸೆಗೆ ನಮಗೆ ಖಚಿತ ಶಿಷ್ಟಾಚಾರದ ಅಗತ್ಯವಿದೆ. ಈ ಲಸಿಕೆಯ ಪ್ರಯೋಗಗಳನ್ನು ಪ್ರಸ್ತುತ ಜಾಗತಿಕವಾಗಿ ಮಾಡಲಾಗುತ್ತಿದೆ. ಹೀಗಾಗಿ ಇದರಿಂದ ಶೇಕಡಾ 100 ರಷ್ಟು ಜನರಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯಾಗಲು ಸಾಧ್ಯವಿಲ್ಲ,’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು