ಮಂಗಳವಾರ, ಮೇ 24, 2022
31 °C

ಭಾರತ–ನೇಪಾಳ ನಡುವೆ ಬಸ್‌ ಸಂಚಾರ ಪುನರಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಲಿಗುರಿ, ಪಶ್ಚಿಮ ಬಂಗಾಳ: ಕೋವಿಡ್‌ನಿಂದಾಗಿ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದ ಪಶ್ಚಿಮ ಬಂಗಾಳದ ಸಿಲಿಗುರಿ ಮತ್ತು ನೇಪಾಳದ ಕಠ್ಮಂಡು ನಡುವಿನ ಬಸ್‌ ಸಂಚಾರ ಪುನರಾರಂಭವಾಗಿದೆ. 

45 ಆಸನಗಳ ಬಸ್‌ ಮಂಗಳವಾರ ಮಧ್ಯಾಹ್ನ ಸಿಲಿಗುರಿಯಿಂದ ಕಠ್ಮಂಡುವಿಗೆ ಹೊರಟಿತು. ಎಲ್ಲಾ ಪ್ರಯಾಣಿಕರು  ಲಸಿಕೆ ಪಡೆದಿರಬೇಕು, ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಸೂಚಿಸಲಾಗಿದೆ.

ಕಠ್ಮಂಡುವಿನಿಂದ ಸಿಲಿಗುರಿಗೆ ಮಂಗಳವಾರ, ಗುರುವಾರ ಮತ್ತು ಶನಿವಾರ ಮಧ್ಯಾಹ್ನ 3 ಗಂಟೆಗೆ ಬಸ್‌ ಹೊರಡಲಿದೆ. ಟಿಕೆಟ್‌ ದರ ₹1,500 ನಿಗದಿಪಡಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು