ಮಾನವ ಅಭಿವೃದ್ಧಿ ಸೂಚ್ಯಂಕ: ಕುಸಿದ ಭಾರತ

ವಿಶ್ವಸಂಸ್ಥೆಯ 2020ರ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತವು 129ನೇ ಸ್ಥಾನದಿಂದ 131ನೇ ಸ್ಥಾನಕ್ಕೆ ಕುಸಿದಿದೆ. ವಿಶ್ವಸಂಸ್ಥೆಯ ಮಾನವ ಅಭಿವೃದ್ಧಿ ಕಾರ್ಯಕ್ರಮದ (ಯುಎನ್ಡಿಪಿ) ವರದಿಯಲ್ಲಿ ಈ ಮಾಹಿತಿ ಇದೆ.
ಮಾನವ ಅಭಿವೃದ್ಧಿ ಸೂಚ್ಯಂಕ ಮೌಲ್ಯದಲ್ಲಿ ಗರಿಷ್ಠ ಅಂಕ 1. ಭಾರತವು ಇದರಲ್ಲಿ 0.645 ಅಂಕ ಪಡೆದಿದೆ. 2019ರಲ್ಲಿ ಭಾರತವು 0.647 ಅಂಕ ಪಡೆದಿತ್ತು. ಹೀಗಾಗಿ 129ನೇ ರ್ಯಾಂಕ್ನಲ್ಲಿತ್ತು.
ಈ ಬಾರಿ ಅಂಕ ಇಳಿಕೆ ಆಗಿರುವ ಕಾರಣ ರ್ಯಾಂಕ್ನಲ್ಲಿಯೂ ಇಳಿಕೆಯಾಗಿದೆ. ಭಾರತವು ಮಧ್ಯಮ ಅಭಿವೃದ್ಧಿ ಸ್ಥಿತಿಯ ದೇಶಗಳ ವರ್ಗದಲ್ಲಿದೆ. 2018ರಲ್ಲಿ ಭಾರತವು 0.431 ಅಂಕ ಪಡೆದಿತ್ತು. ಆಗ ಕಡಿಮೆ ಅಭಿವೃದ್ಧಿ ವಿಭಾಗದಲ್ಲಿ ಗುರುತಿಸಿಕೊಂಡಿತ್ತು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.