ಮಂಗಳವಾರ, ಡಿಸೆಂಬರ್ 1, 2020
26 °C

ಪೇಟೆಂಟ್‌ಮುಕ್ತ ಲಸಿಕೆ: ಬ್ರಿಕ್ಸ್ ಬೆಂಬಲ ಕೋರಿದ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್ ಲಸಿಕೆ ಹಾಗೂ ಔಷಧಗಳನ್ನು ಪೇಟೆಂಟ್‌ ಮುಕ್ತಗೊಳಿಸುವುದಕ್ಕಾಗಿ (ಹಕ್ಕುಸ್ವಾಮ್ಯ) ಚೀನಾ, ರಷ್ಯಾ, ಬ್ರೆಜಿಲ್ ದೇಶಗಳ ಬೆಂಬಲವನ್ನು ಭಾರತ ಕೋರಿದೆ.

ಈ ಸಂಬಂಧ ವಿಶ್ವವಾಣಿಜ್ಯ ಸಂಘ ಟನೆ (ಡಬ್ಲ್ಯೂಟಿಒ) ಎದುರು ಭಾರತ ಪ್ರಸ್ತಾವ ಇರಿಸಿದ್ದು, ಬೆಂಬಲ ನೀಡುವಂತೆ ಬ್ರಿಕ್ಸ್ ದೇಶಗಳನ್ನು ವಿನಂತಿಸಿಕೊಂಡಿದೆ. ಭಾರತದ ಈ ಮನವಿಗೆ ದಕ್ಷಿಣ ಆಫ್ರಿಕ ದನಿಗೂಡಿಸಿದೆ.

ಇದೇ ಶುಕ್ರವಾರ ವಿಶ್ವವಾಣಿಜ್ಯ ಸಂಘ ಟನೆಯ ಟಿಆರ್‌ಐಪಿಎಸ್‌ ಸಭೆಯಲ್ಲಿ (ಬೌದ್ಧಿಕ ಆಸ್ತಿ ಹಕ್ಕುಗಳ ವ್ಯಾಪಾರ ಸಂಬಂಧಿತ ಅಂಶಗಳು) ಭಾರತ ಮಂಡಿ ಸಿರುವ ಪ್ರಸ್ತಾವ ಚರ್ಚೆಗೆ ಬರುವ ಸಾಧ್ಯತೆಯಿದೆ. ಆದರೆ ಪ್ರಸ್ತಾವಕ್ಕೆ ಅಮೆರಿಕ ಹಾಗೂ ಐರೋಪ್ಯ ಒಕ್ಕೂಟ ಒಲವು ತೋರಿಲ್ಲ. ಚೀನಾ ಕೂಡ ತನ್ನ ಕಂಪನಿಗಳು ಅಭಿವೃದ್ಧಿಪಡಿಸಿದ ಕೋವಿಡ್ -19 ಲಸಿಕೆಗಳ ಕ್ಲಿನಿಕಲ್ ಪ್ರಯೋಗ ಮತ್ತು ವಿತರಣೆಯಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾದ ಸಹಕಾರವನ್ನು ಪ್ರಸ್ತಾಪಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.