ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಿ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಪ್ರಯೋಗ

Last Updated 7 ಡಿಸೆಂಬರ್ 2021, 14:15 IST
ಅಕ್ಷರ ಗಾತ್ರ

ಬಾಲಾಸೋರ್‌, ಒಡಿಶಾ (ಪಿಟಿಐ): ದೇಶಿಯವಾಗಿ ಅಭಿವೃದ್ಧಿಪಡಿಸಿರುವ, ಲಂಬವಾಗಿ ಭೂಮಿಯಿಂದ ಗಗನಮುಖಿಯಾಗಿ ಉಡಾವಣೆ ಮಾಡಬಹುದಾದ ನೂತನ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಭಾರತ ಮಂಗಳವಾರ ಯಶಸ್ವಿಯಾಗಿ ನಡೆಸಿತು.

ನೌಕಾಪಡೆಗಾಗಿ ಅಭಿವೃದ್ಧಿಪಡಿಸಲಾಗಿರುವ ಈ ಕ್ಷಿಪಣಿಯ ಪರೀಕ್ಷೆಯನ್ನು ಒಡಿಶಾದ ಕರಾವಳಿ ಭಾಗದ ಚಾಂಡಿಪುರ್‌ನಲ್ಲಿ ಮಧ್ಯಾಹ್ನ 3.08ಕ್ಕೆ ನಡೆಸಲಾಯಿತು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ತಿಳಿಸಿದೆ.

ಕ್ಷಿಪಣಿಯ ವೇಗದ ಗತಿಯನ್ನು ಗಮನಿಸಲು ಹಲವು ಕಣ್ಗಾವಲು ಪರಿಕರಗಳನ್ನು ಬಳಸಲಾಗಿತ್ತು. ಈ ಕ್ಷಿಪಣಿಯ ಕಾರ್ಯವ್ಯಾಪ್ತಿ 50 ಕಿ.ಮೀ ಆಗಿದೆ ಎಂದು ಡಿಆರ್‌ಡಿಒ ಟ್ವೀಟ್ ಮಾಡಿದೆ.

ಕಡಿಮೆ ಸಾಂದ್ರತೆಯ ವಿದ್ಯುನ್ಮಾನ ಗುರಿಯನ್ನು ಕೇಂದ್ರೀಕರಿಸಿ ಪರೀಕ್ಷೆ ನಡೆಸಲಾಯಿತು. ಕ್ಷಿಪಣಿಯನ್ನು ಯುದ್ಧನೌಕೆಗಳಿಗೆ ಅಳವಡಿಸಲಾಗುವುದು ಎಂದು ಡಿಆರ್‌ಡಿಒ ತಿಳಿಸಿದೆ. ಪರೀಕ್ಷಾರ್ಥ ಪ್ರಯೋಗವು ಯಶಸ್ವಿಯಾಗಿ ನಡೆದುದಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಡಿಆರ್‌ಡಿಒಗೆ ಅಭಿನಂದಿಸಿದ್ದಾರೆ.

ಜನರ ಸ್ಥಳಾಂತರ: ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗದ ಹಿನ್ನೆಲೆಯಲ್ಲಿ ಬಾಲಾಸೋರ್‌ ಜಿಲ್ಲಾಡಳಿತವು ಉಡಾವಣೆ ಸ್ಥಳದಿಂದ 2.5 ಕಿ.ಮೀ ವ್ಯಾಪ್ತಿಯಲ್ಲಿದ್ದ ಸುಮಾರು 4,500 ಜನರನ್ನು ಸ್ಥಳಾಂತರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT