ಬುಧವಾರ, ಮೇ 19, 2021
22 °C
ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರ: ವರ್ಚುವಲ್‌ ಸಭೆಯಲ್ಲಿ ಬ್ರಿಟನ್‌–ಭಾರತ ಸಮ್ಮತಿ

ನೀರವ್‌, ಮಲ್ಯ ಶೀಘ್ರ ಹಸ್ತಾಂತರ: ಬ್ರಿಟನ್‌–ಭಾರತ ಸಮ್ಮತಿ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶಭ್ರಷ್ಟ ಉದ್ಯಮಿಗಳಾದ ವಿಜಯ್‌ ಮಲ್ಯ, ನೀರವ್‌ ಮೋದಿ ಅವರ ಶೀಘ್ರ ಹಸ್ತಾಂತರ, ವಿವಿಧ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವಿನ ಸಹಕಾರ ಮತ್ತಷ್ಟೂ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಜಾರಿಗೊಳಿಸಬೇಕಾದ ಕಾರ್ಯಗಳನ್ನು ಒಳಗೊಂಡ ಮುನ್ನೋಟಕ್ಕೆ ಭಾರತ ಹಾಗೂ ಬ್ರಿಟನ್‌ ಮಂಗಳವಾರ ಸಮ್ಮತಿಸಿದವು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರ ನಡುವೆ ನಡೆದ ವರ್ಚುವಲ್‌ ಸಭೆಯಲ್ಲಿ, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ವೃದ್ಧಿಗಗಾಗಿ ಮಹತ್ವದ ಚರ್ಚೆ ನಡೆಯಿತು.

ವಿದೇಶಾಂಗ ಸಚಿವಾಲಯದ ಯುರೋಪ್‌ಗೆ ಸಂಬಂಧಿಸಿದ ವ್ಯವಹಾರಗಳ ವಿಭಾಗದ ಜಂಟಿ ಕಾರ್ಯದರ್ಶಿ ಸಂದೀಪ್‌ ಚಕ್ರವರ್ತಿ ಅವರು ಸಭೆಯ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

‘ದೇಶದ ಬ್ಯಾಂಕುಗಳಿಗೆ ವಂಚಿಸಿ ತಲೆಮರೆಸಿಕೊಂಡಿರುವ ವಿಜಯ್‌ ಮಲ್ಯ ಹಾಗೂ ನೀರವ್‌ ಮೋದಿ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತಂತೆಯೂ ಸಭೆಯಲ್ಲಿ ಪ್ರಸ್ತಾಪವಾಯಿತು’ ಎಂದು ತಿಳಿಸಿದರು.

‘ಆರ್ಥಿಕ ಅಪರಾಧಗಳನ್ನು ಮಾಡಿ ಬ್ರಿಟನ್‌ನಲ್ಲಿ ತಲೆಮರೆಸಿಕೊಂಡಿರುವವರನ್ನು ಶೀಘ್ರವೇ ಹಸ್ತಾಂತರಿಸಲು ಕ್ರಮ ಕೈಗೊಳ್ಳುವಂತೆ ಪ್ರಧಾನಿ ಮೋದಿ ಹೇಳಿದರು’ ಎಂದು ಸಂದೀಪ್‌ ಚಕ್ರವರ್ತಿ ವಿವರಿಸಿದರು.

‘ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಬ್ರಿಟನ್‌ನಲ್ಲಿ ತನ್ನ ಉತ್ಪಾದನಾ ಘಟಕ ಸ್ಥಾಪಿಸಲಿದೆ. ಲಸಿಕೆಯನ್ನು ಉತ್ಪಾದಿಸಿಲಿದೆ ಎಂಬುದಾಗಿ ಬೋರಿಸ್‌ ಜಾನ್ಸನ್‌ ತಿಳಿಸಿದರು’ ಎಂದರು.

‘ಉಭಯ ದೇಶಗಳ ಜನರ ನಡುವೆ ಬಾಂಧವ್ಯ ವೃದ್ಧಿ, ವ್ಯಾಪಾರ, ರಕ್ಷಣೆ, ಭದ್ರತೆ, ಹವಾಮಾನ ಬದಲಾವಣೆ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸಹಕಾರ ಹೆಚ್ಚಿಸಲು ‘ಮುನ್ನೋಟ–2030’ ಅಡಿ ಕಾರ್ಯಕ್ರಮ ರೂಪಿಸಲು ಉಭಯ ನಾಯಕರು ಸಮ್ಮತಿಸಿದರು’ ಎಂದೂ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು