ಬುಧವಾರ, ಜೂನ್ 29, 2022
26 °C

ಸಂದರ್ಶನ ನಿರಾಕರಿಸಿದ್ದಕ್ಕೆ ಪತ್ರಕರ್ತನಿಂದ ಬೆದರಿಕೆ: ಸಹಾ ಬೆನ್ನಿಗೆ ನಿಂತ ಐಸಿಎ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರಿಗೆ ಪತ್ರಕರ್ತರೊಬ್ಬರು ಬೆದರಿಕೆ ಹಾಕಿರುವುದನ್ನು ಭಾರತೀಯ ಕ್ರಿಕೆಟಿಗರ ಸಂಸ್ಥೆ (ಐಸಿಎ) ಮಂಗಳವಾರ ಖಂಡಿಸಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಐಸಿಎ, ಪ್ರಕರಣದಲ್ಲಿ ಬಿಸಿಸಿಐ ಕಠಿಣ ಕ್ರಮ ಕೈಗೊಳ್ಳಬೇಕು ಸಂಸ್ಥೆ ಒತ್ತಾಯಿಸಿದೆ.

ಕ್ರಿಕೆಟ್‌ ಮತ್ತು ಆಟಗಾರರ ಬೆಳವಣಿಗೆಯಲ್ಲಿ ಮಾಧ್ಯಮಗಳು ಬಹುಮುಖ್ಯ ಪಾತ್ರ ವಹಿಸಿವೆ. ಆದರೆ, ಯಾರು ತಮ್ಮ ಪರಿಮಿತಿಗಳನ್ನು ಮೀರಬಾರದು. ವೃದ್ಧಿಮಾನ್‌ ಸಹಾ ಅವರ ವಿಚಾರದಲ್ಲಿ ಆಗಿರುವ ಘಟನೆ ಒಪ್ಪುವಂಥದ್ದಲ್ಲ. ಪತ್ರಕರ್ತರ ಸಂಘಟನೆಯು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಇಂಥ ಘಟನೆಗಳು ಪುನರಾವರ್ತನೆಯಾಗದಂತೆ ಎಚ್ಚರ ವಹಿಸಬೇಕು.

‘ತಪ್ಪು ಮಾಡಿದ ಪತ್ರಕರ್ತರ ಮಾನ್ಯತೆ ರದ್ದುಗೊಳಿಸುವ, ಬಿಸಿಸಿಐನ ಕಾರ್ಯಕ್ರಮಗಳಿಗೆ ಪ್ರವೇಶವನ್ನು ನಿರಾಕರಿಸುವ ನಿರ್ಧಾರವನ್ನು ಬಿಸಿಸಿಐ ಕೈಗೊಂಡಿದ್ದೇ ಆದರೆ, ಸಂಸ್ಥೆಯು ಅದನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ‘ ಎಂದು ಅಧ್ಯಕ್ಷ ಅಶೋಕ್ ಮಲ್ಹೋತ್ರಾ ಹೇಳಿದ್ದಾರೆ.‌

ಈ ಪ್ರಕರಣದಲ್ಲಿ ಸಂಸ್ಥೆಯು ವೃದ್ಧಿಮಾನ್‌ ಸಹಾ ಅವರ ಪರವಾಗಿ ನಿಲ್ಲಲಿದೆ ಎಂದೂ ಅವರು ತಿಳಿಸಿದ್ದಾರೆ.

ಸಂದರ್ಶನ ನೀಡಲು ನಿರಾಕರಿಸಿದ ನಂತರ ‘ಗೌರವಾನ್ವಿತ’ ಪತ್ರಕರ್ತರೊಬ್ಬರು ಜೋರುಧ್ವನಿಯಲ್ಲಿ ಬೆದರಿಕೆ ಒಡ್ಡಿದ್ದಾರೆ ಎಂದು ಸಹಾ ಟ್ವಿಟರ್‌ನಲ್ಲಿ ಆರೋಪಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು