ದೇಶವನ್ನು ಒಡೆಯುವುದು ದೇಶಭಕ್ತಿಯಲ್ಲ, ದೇಶ ಒಗ್ಗೂಡಿಸುವುದು ದೇಶಪ್ರೇಮ: ರಾಹುಲ್

ನವದೆಹಲಿ: ಹಣದುಬ್ಬರ ಹಾಗೂ ನಿರುದ್ಯೋಗ ಸಮಸ್ಯೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಭಾರತ್ ಜೋಡೊ ಯಾತ್ರೆ ವೇಳೆ ತಾವು ಮಾತನಾಡಿರುವ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ರಾಹುಲ್, ‘ಹಣದುಬ್ಬರ ಹೆಚ್ಚಳ ದೇಶಭಕ್ತಿಯೇ?, ನಿರುದ್ಯೋಗ ಸಮಸ್ಯೆ ದೇಶಭಕ್ತಿಯೇ?, ತಪ್ಪಾದ ಜಿಎಸ್‌ಟಿ ದೇಶಭಕ್ತಿಯೇ?, ಚೀನಾ ಅತಿಕ್ರಮಣ ಕುರಿತು ಸುಳ್ಳು ಹೇಳುವುದು ದೇಶಭಕ್ತಿಯೇ’ ಎಂದು ಪ್ರಶ್ನಿಸಿದ್ದಾರೆ.
ದೇಶವನ್ನು ಒಡೆಯುವುದು ದೇಶಭಕ್ತಿಯಲ್ಲ, ದೇಶವನ್ನು ಒಗ್ಗೂಡಿಸುವುದು ದೇಶಪ್ರೇಮ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ರಾಹುಲ್ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ಯಾತ್ರೆಯೂ 69ನೇ ದಿನಕ್ಕೆ ಕಾಲಿರಿಸಿದ್ದು, ಮಹಾರಾಷ್ಟ್ರದಲ್ಲಿ ಸಾಗುತ್ತಿದೆ. ಶಿವಸೇನಾ, ಎನ್‌ಸಿಪಿ ನಾಯಕರು ರಾಹುಲ್‌ಗೆ ಸಾಥ್ ನೀಡಿದ್ದಾರೆ.
ಓದಿ... ಕ್ಷೇತ್ರವಿಲ್ಲದೆ ಅಲೆದಾಡುತ್ತಿರುವ ಸಿದ್ದರಾಮಯ್ಯ ಮನೆಯಲ್ಲಿರುವುದು ಸೂಕ್ತ: ಬಿಜೆಪಿ
महंगाई देशभक्ति है?
बेरोज़गारी देशभक्ति है?
ग़लत जीएसटी देशभक्ति है?
चीन पर झूठ बोलना देशभक्ति है?देश तोड़ना देशभक्ति नहीं, देश जोड़ना देशभक्ति है। pic.twitter.com/R8oMx5z1rb
— Rahul Gandhi (@RahulGandhi) November 15, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.