ಸೋಮವಾರ, ಸೆಪ್ಟೆಂಬರ್ 26, 2022
20 °C

ಹಬ್ಬದ ಅವಧಿ: ಮಂಗಳವಾರದಿಂದ 416 ವಿಶೇಷ ರೈಲುಗಳ ಸಂಚಾರ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

Indian railway

ನವದೆಹಲಿ: ಹಬ್ಬದ ಅವಧಿಯ ಹಿನ್ನೆಲೆಯಲ್ಲಿ ಅಕ್ಟೋಬರ್ 20ರಿಂದ ನವೆಂಬರ್ 30ರ ವರೆಗೆ 416 ವಿಶೇಷ ರೈಲುಗಳು ಕಾರ್ಯಾಚರಿಸಲಿವೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.

ಪ್ರಸ್ತುತ 682 ವಿಶೇಷ ರೈಲುಗಳು ಮತ್ತು 20 ಕ್ಲೋನ್ಡ್ ರೈಲುಗಳು ಕಾರ್ಯಾಚರಿಸುತ್ತಿವೆ.

ಹೊಸದಾಗಿ ಸಂಚರಿಸಲಿರುವ ವಿಶೇಷ ರೈಲುಗಳು ಕೋಲ್ಕತ್ತ, ಪಟ್ನಾ, ವಾರಾಣಸಿ, ಲಖನೌ ಸೇರಿದಂತೆ ಪ್ರಮುಖ ನಗರಗಳ ನಡುವೆ ಸಂಪರ್ಕ ಬೆಸೆಯಲಿವೆ. ದುರ್ಗಾ ಪೂಜೆ, ದಸರಾ, ದೀಪಾವಳಿ ಹಾಗೂ ಛಾತ್ ಪೂಜಾ ಹಬ್ಬಗಳ ಹಿನ್ನೆಲೆಯಲ್ಲಿ ಈ ರೈಲುಗಳನ್ನು ಆರಂಭಿಸಲಾಗುತ್ತಿದೆ .

ಸಾಮಾನ್ಯ ರೈಲುಗಳಿಗೆ ಹೋಲಿಸಿದರೆ ವಿಶೇಷ ರೈಲುಗಳ ಟಿಕೆಟ್ ದರ ಶೇ 10ರಿಂದ 30ರಷ್ಟು ಹೆಚ್ಚಿರಲಿದೆ. ಸಂಚಾರದ ವೇಳಾಪಟ್ಟಿಯನ್ನು ಆಯಾ ವ್ಯಾಪ್ತಿಯ ರೈಲ್ವೆ ವಲಯಗಳು ನಿರ್ಧರಿಸಲಿವೆ. ಈ ರೈಲುಗಳು ಗಂಟೆಗೆ ಕನಿಷ್ಠ 55 ಕಿ.ಮೀ ವೇಗದಲ್ಲಿ ಸಂಚರಿಸಲಿವೆ ಎಂದು ರೈಲ್ವೆ ಮಂಡಳಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು