ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಮನವಿ

Last Updated 19 ಫೆಬ್ರುವರಿ 2021, 11:41 IST
ಅಕ್ಷರ ಗಾತ್ರ

ನವದೆಹಲಿ: ರಷ್ಯಾದ ಕೋವಿಡ್–19 ಲಸಿಕೆ ‘ಸ್ಪುಟ್ನಿಕ್ ವಿ’ಯ ತುರ್ತು ಬಳಕೆಗೆ ದೇಶದಲ್ಲಿ ಅನುಮತಿ ನೀಡುವಂತೆ ಮನವಿ ಮಾಡಲಾಗಿದೆ ಎಂದು ಔಷಧ ತಯಾರಿಕಾ ಕಂಪನಿ ಡಾ. ರೆಡ್ಡಿಸ್‌ ಲ್ಯಾಬೊರೇಟರೀಸ್ ತಿಳಿಸಿದೆ.

ಮಧ್ಯಮ ಹಂತದ ಅಧ್ಯಯನದ ಸುರಕ್ಷತಾ ವಿವರ, ಮಧ್ಯಂತರ ದತ್ತಾಂಶಗಳು ಹಾಗೂ ಇಂದು (ಫೆ.21) ಕೊನೆಗೊಳ್ಳಲಿರುವ ಕೊನೆಯ ಹಂತದ ಪ್ರಯೋಗದ ವಿವರಗಳನ್ನು ಸರ್ಕಾರಕ್ಕೆ ನೀಡಲಾಗುವುದು ಎಂದೂ ಕಂಪನಿ ಹೇಳಿದೆ.

ಮಾಸ್ಕೊದ ಗಮಾಲೆಯಾ ಸಂಸ್ಥೆ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್ ವಿ ಲಸಿಕೆಗೆ ರಷ್ಯಾದ ನೇರ ಹೂಡಿಕೆ ನಿಧಿಯು (ಆರ್‌ಡಿಐಎಫ್‌) ವಿದೇಶಗಳಲ್ಲಿ ಮಾರುಕಟ್ಟೆ ಒದಗಿಸುತ್ತಿದೆ. ಈಗಾಗಲೇ ಲಸಿಕೆ ಮಾರಾಟಕ್ಕೆ 30 ದೇಶಗಳಲ್ಲಿ ನೋಂದಣಿ ಮಾಡಿಕೊಳ್ಳಲಾಗಿದೆ.

ಭಾರತದಲ್ಲಿ ‘ಡಾ. ರೆಡ್ಡಿಸ್‌ ಲ್ಯಾಬೊರೇಟರೀಸ್ ಲಿಮಿಟೆಡ್’ ಸ್ಪುಟ್ನಿಕ್ ವಿ ಲಸಿಕೆ ಪ್ರಯೋಗ ನಡೆಸುತ್ತಿದೆ. ಸ್ಪುಟ್ನಿಕ್-ವಿ ಕೋವಿಡ್‌ ಲಸಿಕೆಯು ಶೇ 91.6 ಪರಿಣಾಮಕಾರಿಯಾಗಿದೆ ಎಂದು 'ದಿ ಲ್ಯಾನ್ಸೆಟ್ ಇಂಟರ್‌ ನ್ಯಾಷನಲ್‌ ಮೆಡಿಕಲ್' ನಿಯತಕಾಲಿಕೆಯಲ್ಲಿ ಇತ್ತೀಚೆಗೆ ಹೇಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT