ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತ ಮೇಜರ್ ಜನರಲ್ ಆರ್‌.ಎನ್‌.ಚಿಬ್ಬರ್ ನಿಧನ

Last Updated 22 ನವೆಂಬರ್ 2020, 10:22 IST
ಅಕ್ಷರ ಗಾತ್ರ

ಜಮ್ಮು: ಇಂಡೊ–ಪಾಕ್ ಸೇರಿದಂತೆ ಮೂರು ಪ್ರಮುಖ ಯುದ್ಧಗಳಲ್ಲಿ ಭಾಗವಹಿಸಿದ್ದ ನಿವೃತ್ತ ಮೇಜರ್ ಜನರಲ್ ಆರ್‌.ಎನ್‌. ಚಿಬ್ಬರ್ (86) ಶನಿವಾರ ಇಲ್ಲಿನ ಕಲುಚಕ್‌ ಪ್ರದೇಶದ ತಮ್ಮ ನಿವಾಸದಲ್ಲಿ ನಿಧನರಾದರು ಎಂದು ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

1934ರ ಸೆಪ್ಟೆಂಬರ್ 23ರಂದು ಜನಿಸಿದ್ದ ಆರ್‌.ಎನ್‌. ಚಿಬ್ಬರ್, 1956ರಲ್ಲಿ ಡೆಹ್ರಾಡೂನ್ ಇಂಡಿಯನ್ ಮಿಲಿಟರಿ ಅಕಾಡೆಮಿಯಿಂದ ಪದವಿ ಪಡೆದು, ಸೇನೆಗೆ ಸೇರಿದ್ದರು.

ನಂತರ 1962, 1965 ಹಾಗೂ 1971ರಲ್ಲಿ ನಡೆದ ಯುದ್ಧಗಳಲ್ಲಿ ಅವರು ಭಾಗವಹಿಸಿದ್ದರು. 1972 ರಿಂದ 1975ರವರೆಗೆ ಅಫ್ಗಾನಿಸ್ತಾನದಲ್ಲಿ ಮಿಲಿಟರಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

‘ಅವರೊಬ್ಬ ಅದ್ಭುತ ಅಧಿಕಾರಿಯಾಗಿದ್ದರು. 8 ಜಾಟ್‌ ರೆಜಿಮೆಂಟ್‌ನ ಕಮಾಂಡರ್‌ ಆಗಿದ್ದರು. ಅವರಿಗಿದ್ದ ಪರಿಣತಿ, ಅಸಾಧಾರಣ ಬುದ್ಧಿವಂತಿಕೆಯು ಅವರನ್ನೊಬ್ಬ ಮುಂಚೂಣಿ ಅಧಿಕಾರಿಯಾಗಿ ರೂಪಿಸಿತ್ತು‘ ಎಂದು ವಕ್ತಾರರು ತಿಳಿಸಿದ್ದಾರೆ.

’ಜನರಲ್ ಚಿಬ್ಬರ್ ಜಾಟ್‌ ರೆಜಿಮೆಂಟ್‌ಗಳ ಕರ್ನಲ್ ಆಗಿದ್ದರು. ಅವರ ವೃತ್ತಿಜೀವನದುದ್ದಕ್ಕೂ ತಮ್ಮೊಟ್ಟಿಗಿದ್ದ ಸೈನಿಕರು ಮತ್ತು ಅವರ ಕುಟುಂಬಗಳ ಉನ್ನತಿಗಾಗಿ ಶ್ರಮಿಸುತ್ತಿದ್ದರು‘ ಎಂದು ಅವರು ಹೇಳಿದ್ದಾರೆ.

ಸಹೋದ್ಯೋಗಿ ಕರ್ನಲ್ ಮಖನ್ ಸಿಂಗ್ ಗಿಲ್, ‘ಜನರಲ್ ಚಿಬ್ಬರ್ ಒಬ್ಬ ಸಂತ ಸೈನಿಕ. ಅತ್ಯಂತ ಗೌರವಾನ್ವಿತ ಮತ್ತು ಮೆಚ್ಚುಗೆ ಪಡೆದ ಅಧಿಕಾರಿ. ನಿವೃತ್ತಿಯ ಮೂರು ದಶಕಗಳ ನಂತರವೂ ಎಷ್ಟೊ ಜನರ ಹೃದಯದಲ್ಲಿ ಉಳಿದುಕೊಂಡಿರುವ ವ್ಯಕ್ತಿ‘ ಎಂದು ಬಣ್ಣಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT