ಮುಂದಿನ ವರ್ಷದೊಳಗೆ ವಾಯುಪಡೆಗೆ ರಫೇಲ್ ವಿಮಾನಗಳ ಸೇರ್ಪಡೆ

ಹೈದರಾಬಾದ್: ‘ಫ್ರಾನ್ಸ್ನಿಂದ ಬಂದಿರುವ 36 ರಫೇಲ್ ಯುದ್ಧ ವಿಮಾನಗಳನ್ನು ಮುಂದಿನ ವರ್ಷದೊಳಗೆ (2022) ವಾಯುಪಡೆಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆ ನಡೆಯಲಿದೆ‘ ಎಂದು ಭಾರತೀಯ ವಾಯಪಡೆ (ಐಎಎಫ್) ಮುಖ್ಯಸ್ಥ ಆರ್ಕೆಎಸ್ ಭದೌರಿಯಾ ಹೇಳಿದರು.
ಇಲ್ಲಿನ ದುಗಾಲ್ನಲ್ಲಿರುವ ವಾಯುಪಡೆ ಅಕಾಡೆಮಿಯಲ್ಲಿ ಶನಿವಾರ ನಡೆದ ‘ಕಂಬೈಡ್ ಗ್ರಾಜುಯೇಶನ್ ಪರೇಡ್ (ಸಿಜಿಪಿ) ಕಾರ್ಯಕ್ರಮದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಭಾರತಕ್ಕೆ ಬಂದಿರುವ ರಫೇಲ್ ಯುದ್ಧ ವಿಮಾನಗಳನ್ನು ಯಾವಾಗ ಐಎಎಫ್ಗೆ ಸೇರ್ಪಡೆಗೊಳಿಸಲಾಗುತ್ತದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘2022ರೊಳಗೆ ವಿಮಾನಗಳನ್ನು ವಾಯುಪಡೆಗೆ ಸೇರ್ಪಡೆಗೊಳಿಸುವ ಗುರಿ ಇಟ್ಟುಕೊಂಡಿದ್ದೇವೆ. ಕೋವಿಡ್–19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಒಂದೆರಡು ವಿಮಾನಗಳು ಬರುವುದು ವಿಳಂಬವಾಗಿದೆ. ಇನ್ನು ಉಳಿದ ವಿಮಾನಗಳೆಲ್ಲ ನಿಗದಿತ ಸಮಯಕ್ಕೆ ಬಂದು ತಲುಪಿವೆ. ನಿಗದಿತ ಅವಧಿಯಲ್ಲೇ ವಿಮಾನಗಳನ್ನು ವಾಯುಪಡೆಗೆ ಸೇರ್ಪಡೆಗೊಳಿಸಲಾಗುತ್ತದೆ‘ ಎಂದು ಹೇಳಿದರು.
‘ರಫೇಲ್ಗಳ ಕಾರ್ಯನಿರ್ವಹಣೆ ಯೋಜನೆ ಬಗ್ಗೆ ನಿಮಗೆ ಈಗಾಗಲೇ ತಿಳಿದಿದೆ. ನಾವು ಈಗಾಗಲೇ ಎಲ್ಲ ವಿಮಾನಗಳ ಕಾರ್ಯನಿರ್ವಹಣೆಯನ್ನು ಪೂರ್ಣಗೊಳಿಸಿದ್ದೇವೆ. ಆದರಿಂದ ನಿಗದಿತ ಸಮಯಕ್ಕೆ ಸರಿಯಾಗಿ ಎಲ್ಲ ಪ್ರಕ್ರಿಯೆಗಳು ನಡೆಯಲಿವೆ‘ ಎಂದು ಅವರು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.